
ಬೆಂಘಜಿ, ಮಾ.30- ಕಾರ್ ಬಾಂಬ್ ದಾಳಿಯಲ್ಲಿ ಎಂಟು ಮಂದಿ ಹತರಾಗಿ ಅನೇಕರು ಗಾಯಗೊಂಡಿರುವ ಘಟನೆ ಲಿಬಿಯಾದ ಪೂರ್ವ ಭಾಗದ ಭದ್ರತಾ
ತಪಾಸಣಾ ಠಾಣೆ ಬಳಿ ನಡೆದಿದೆ. ಒಂದು ತಿಂಗಳಲ್ಲಿ ನಡೆದ ಎರಡನೇ ಆತ್ಮಾಹುತಿ ಆಕ್ರಮಣ ಇದಾಗಿದೆ. ಅಡ್ಜಬಿಯಾ ನಗರದ ಬಳಿ ಲಿಬಿಯಾದ ಪ್ರಭಾವಿ ನಾಯಕ ಖಾಲಿಫಾ ಹಫ್ತರ್‍ಗೆ ನಿಷ್ಠರಾದ ಪಡೆಗಳು ಕಾವಲು ಇದ್ದ ಚೆಕ್‍ಪೆÇೀಸ್ಟ್ ಬಳಿ ಆತ್ಮಾಹುತಿ ದಾಳಿಕೋರನೊಬ್ಬ ತನ್ನ ವಾಹನವನ್ನು ಸ್ಫೋಟಿಸಿದ. ಈ ಆಕ್ರಮಣದಲ್ಲಿ ಎಂಟು ಮಂದಿ ಮೃತಪಟ್ಟು, ಇತರ ಎಂಟು ಮಂದಿ ತೀವ್ರ ಗಾಯಗೊಂಡಿದ್ದಾರೆ. ಮಾ.9ರಂದು ಇದೇ ಪ್ರದೇಶದಲ್ಲಿ ನಡೆದ ಮಾನವ ಬಾಂಬ್ ದಾಳಿಯಲ್ಲಿ
ಅನೇಕರು ಗಾಯಗೊಂಡಿದ್ದರು.