ಬೆಳಗಾವಿ, ಮಾ.30- ಕಾರೊಂದರಲ್ಲಿ ಯಾವುದೇ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 9.75 ಲಕ್ಷ ಹಣವನ್ನು ಜಪ್ತಿ ಮಾಡಿ ಚುನಾವಣಾ ಜಾಗೃತ ದಳ ಅಧಿಕಾರಿಗಳು ಈ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಕೊಲ್ಲಾಪುರ ನಗರದಿಂದ ಗಡಹಿಂಗ್ಲಿಗ ತೆರಳುತ್ತಿದ್ದ ಕಾರನ್ನು ಕೋಗನ್ಹಳ್ಳಿ ಚೆಕ್ಫೆÇೀಸ್ಟ್ ಬಳಿ ತಡೆದು ಪರಿಶೀಲಿಸಿದಾಗ ಅದರಲ್ಲಿ ಪೇಪರ್ನಲ್ಲಿ ಸುತ್ತಿ ಸೀಟಿನ ಕೆಳಗೆ ಇರಿಸಿದ್ದ ಲಕ್ಷಾಂತರ ರೂ. ಪತ್ತೆಯಾಗಿತ್ತು. ಅದರಲ್ಲಿದ್ದವರನ್ನು ವಿಚಾರಿಸಿದಾಗ ವಿಭಿನ್ನ ಉತ್ತರಗಳು ಬಂದವು.
ತಕ್ಷಣ ಟವೇರಾ ವಾಹನದ ಜತೆಗೆ ಚಾಲಕ ಸಂತೋಷ್ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಲಾಗಿದೆ.
ನಿಪ್ಪಾಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಸ್.ಜಿಯಾವುಲ್ಲಾ ತಿಳಿಸಿದ್ದಾರೆ.