ತುಮಕೂರು, ಮಾ.30-ಒಂದು ವೋಟ್ಗೆ ಒಂದು ಪ್ಯಾಕೆಟ್ ಅಡುಗೆ ಎಣ್ಣೆ, ಮೈದಾ ಹಿಟ್ಟು , ಒಂದು ಕೆಜಿ ಬೆಲ್ಲ ಹೀಗೆ ಮತದಾರರಿಗೆ ಆಮಿಷವೊಡ್ಡಿ ವಿತರಣೆ ಮಾಡುತ್ತಿರುವುದು ಕಂಡುಬಂದದ್ದು ಮಧುಗಿರಿಯ ಗುಟ್ಟೆ ಗ್ರಾಮದಲ್ಲಿ.
ಗ್ರಾಮದ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಸದಸ್ಯರೊಬ್ಬರ ಮನೆಯೊಂದರಲ್ಲಿ ಮತದಾರರಿಗೆ ಆಮಿಷವೊಡ್ಡಿ ಅಡುಗೆ ಎಣ್ಣೆ, ಮೈದಾಹಿಟ್ಟು, ಬೆಲ್ಲ ಹಂಚಲಾಗುತ್ತಿತ್ತು ಎನ್ನಲಾಗಿದೆ.
ಮತದಾರರೂ ಕೂಡ ತಾಮುಂದೆ-ನಾಮುಂದು ಎಂದು ಮುಗಿಬಿದ್ದು ಆಹಾರ ಪದಾರ್ಥಗಳನ್ನು ಸ್ವೀಕರಿಸುತ್ತಿದ್ದ ದೃಶ್ಯ ಕಂಡುಬಂತು.
ಈ ಬಗ್ಗೆ ಚುನಾವಣಾ ಅಧಿಕಾರಿಗಳಾಗಲಿ ಯಾವುದೇ ಕ್ರಮಕೈಗೊಂಡಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.