![steve-smith-afp_806x605_51522314728](http://kannada.vartamitra.com/wp-content/uploads/2018/03/steve-smith-afp_806x605_51522314728-508x381.jpg)
ಸಿಡ್ನಿ:ಮಾ-29: ಚೆಂಡನ್ನು ವಿರೂಪಗೊಳಿಸದ ಪ್ರಕರಣದ ಸಂಪೂರ್ಣ ಹೊಣೆ ಹೊತ್ತಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್, ಘಟನೆಗೆ ಸಂಬಂಧಿಸಿದಂತೆ ತಮ್ಮ ಪೋಷಕರ ಹಾಗೂ ಆಸೀಸ್ ಜನರ ಕ್ಷಮೆ ಕೇಳಿದ್ದಾರೆ.
ಕಳೆದ ಶನಿವಾರ ನಡೆದ ಎಲ್ಲ ಘಟನೆಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುವೇ, ಯಾರ ಮೇಲೂ ಆರೋಪ ಮಾಡಲಾರೆ, ದಯಾಮಾಡಿ ನನ್ನ ತಪ್ಪನ್ನು ಕ್ಷಮಿಸಿ ಬಿಡಿ ಎಂದು ಸ್ಟೀವ್ ಸ್ಮೀತ್ ಮಾಧ್ಯಮಗಳ ಎದುರು ಕ್ಷಮೆ ಕೋರಿದರು.
ದಕ್ಷಿಣಾ ಆಫ್ರಿಕಾದಿಂದ ಸಿಡ್ನಿಗೆ ಆಗಮಿಸಿದ ಸ್ಟೀವ್ ಸ್ಮಿತ್ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯ ಬಳಿಕ ಮೊದಲ ಬಾರಿಗೆ ಮಾಧ್ಯಮ ಗೋಷ್ಠಿ ನಡೆಸಿ ಕ್ಷಮೆಯಾಚಿಸಿದರು.
ಘಟನೆ ಕುರಿತಂತೆ ತೀವ್ರ ಭಾವುಕರಾಗಿದ್ದ ಸ್ಮಿತ್ ಕಣ್ಣೀರಾದರು. ಕ್ರಿಕೆಟ್ ವಿಶ್ವದ ಶ್ರೇಷ್ಠ ಆಟವಾಗಿದೆ, ಕ್ರಿಕೆಟ್ ನನ್ನ ಬದುಕಾಗಿದೆ, ಮುಂದೆ ಇಂತಹ ತಪ್ಪು ಮಾಡಲಾರೆ, ಇದು ನನ್ನ ಜೀವನದಲ್ಲಿ ಮರೆಯಲಾರದ ಅತ್ಯಂತ ಕಹಿ ಘಟನೆಯಾಗಿದೆ, ದಯಟ್ಟು ಎಲ್ಲರೂ ನನ್ನ ಕ್ಷಮಿಸಿ ಬಿಡಿ ಎಂದರು.
ಮುಂದಿನ ದಿನಗಳಲ್ಲಿ ಕಳೆದು ಹೋದ ಗೌರವವನ್ನು ಮರಳಿ ಪಡೆಯುವ ವಿಶ್ವಾಸವಿದೆ ಎಂದ ಅವರು, ಆಸ್ಟ್ರೇಲಿಯಾ ಕ್ರಿಕೆಟ್ ಅಭಿಮಾನಿಗಳ ಮನಸ್ಸು ನೋಯಿಸಿದಕ್ಕೆ ಕ್ಷಮೆ ಇರಲಿ ಎಂದರು.