ಬೆಂಗಳೂರು, ಮಾ.29- ತನ್ನ ಜೀವನ ಹಾಳು ಮಾಡಿದ್ದೇ ಅಲ್ಲದೆ ತನ್ನ 13 ವರ್ಷದ ಮಗಳ ಮೇಲೆ ಕಣ್ಣಾಕಿದ್ದ ಪ್ರಿಯತಮನನ್ನು ಪ್ರಿಯತಮೆಯೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಪೀಣ್ಯ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದಾಸರಹಳ್ಳಿ ನಿವಾಸಿ ರಘು (35) ಹತನಾದ ಪ್ರಿಯತಮ. ಕೊಲೆ ಮಾಡಿದ ಪ್ರಿಯತಮೆಯನ್ನು ರೂಪಾ (32) ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ: ವೃತ್ತಿಯಲ್ಲಿ ಬಡಗಿಯಾಗಿರುವ ದಾಸರಹಳ್ಳಿ ನಿವಾಸಿ ರಘು ವಿವಾಹಿತನಾಗಿದ್ದು, ಅನ್ನಪೂರ್ಣೇಶ್ವರಿ ಬಡಾವಣೆಯ 11ನೆ ಕ್ರಾಸ್ನಲ್ಲಿ ವಾಸಿಸುತ್ತಿದ್ದ ವಿವಾಹಿತ ಮಹಿಳೆ ರೂಪಾ ಎಂಬುವರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ.
ಪದೇ ಪದೇ ಮನೆಗೆ ಬಂದು ಹೋಗುತ್ತಿದ್ದ ರಘು ಇತ್ತೀಚೆಗೆ ರೂಪಾ ಅವರ 13 ವರ್ಷದ ಪುತ್ರಿ ಮೇಲೆ ಕಣ್ಣಾಕಿದ್ದ.
ರಘು, ತನ್ನ ಪುತ್ರಿ ಮೇಲೆ ಕಣ್ಣಾಕಿದ್ದ ವಿಷಯ ತಿಳಿದ ರೂಪಾ ಬುದ್ಧಿವಾದ ಹೇಳಿದ್ದರೂ ಆತ ತನ್ನ ಚಾಳಿ ಬಿಟ್ಟಿರಲಿಲ್ಲ. ಹೀಗಾಗಿ ಆತನನ್ನು ಮುಗಿಸಲು ಸ್ಕೆಚ್ ಹಾಕಿದ್ದಳು.
ನಿನ್ನೆ ರಾತ್ರಿ ಮನೆಗೆ ಬಂದ ರಘುಗೆ ಮುದ್ದೆಯಲ್ಲಿ ನಿದ್ದೆ ಮಾತ್ರೆ ಬೆರೆಸಿಕೊಟ್ಟ ರೂಪಾ ಆತ ನಿದ್ದೆಗೆ ಜಾರುತ್ತಿದ್ದಂತೆ ಈಳಿಗೆ ಮಣೆಯಿಂದ ಮನಬಂದಂತೆ ಇರಿದು ಕೊಲೆ ಮಾಡಿದ್ದಾಳೆ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್ಸಿಂಗ್ ರಾಟೋರ್ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೀಣ್ಯ ಪೆÇಲೀಸರು ಆರೋಪಿ ರೂಪಾಳನ್ನು ವಶಕ್ಕೆ ತೆಗೆದುಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.