ಶ್ರೀಗಂಧದ ಮರಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಶ್ರೀಗಂಧ ಚೋರನ ವಶ:

ಕುಣಿಗಲ್, ಮಾ.29- ಶ್ರೀಗಂಧದ ಮರಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಶ್ರೀಗಂಧ ಚೋರರನ್ನು ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ 11 ಕೆಜಿ ತೂಕದ ಚಂದನದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಹುಲಿಯೂರು ದುರ್ಗ ಹೋಬಳಿ ರಾಜೇಂದ್ರಪುರದ ವಾಸಿ ಮುನಿಯಪ್ಪ (40) ಬಂಧಿತ ಶ್ರೀಗಂಧ ಚೋರ. ಮುನಿಯಪ್ಪ ಸೇರಿದಂತೆ ಮೂವರು ಶ್ರೀಗಂಧ ಚೋರರು ಹುಲಿಯೂರು ದುರ್ಗದ ಕಂಪಲಪುರ ಅರಣ್ಯ ಪ್ರದೇಶದಲ್ಲಿ ಹಲವು ದಿನಗಳಿಂದ ಶ್ರೀಗಂಧದ ಮರಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸಾಮಾಜಿಕ ಅರಣ್ಯ ವಲಯ ಅಧಿಕಾರಿ ರವಿ ಅವರು ದಾಳಿ ನಡೆಸಿದಾಗ 11 ಕೆಜಿ ಶ್ರೀಗಂಧದ ಮರದ ತುಂಡುಗಳೊಂದಿಗೆ ಮುನಿಯಪ್ಪನನ್ನು ಬಂಧಿಸಿದ್ದು, ಇನ್ನಿಬ್ಬರು ಚೋರರಿಗಾಗಿ ಹುಡುಕಾಟ ನಡೆಸಿದ್ದಾರೆ.
ದಾಳಿಯಲ್ಲಿ ಉಪವಲಯ ಅರಣ್ಯಾಧಿಕಾರಿ ನಂಜಯ್ಯ, ಮಹೇಶ್, ಅರಣ್ಯ ರಕ್ಷಕರಾದ ಅಂಜನಮೂರ್ತಿ, ರಂಗಸ್ವಾಮಿ, ಬೋರೇಗೌಡ ಭಾಗವಹಿಸಿದ್ದರು. ಪೆÇಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ