ರಾಜಧಾನಿ ಬೆಂಗಳೂರಿನಲ್ಲಿ ರೌಡಿ ಶೀಟರ್ ನಿರ್ಮಲ್ ಕಾಲಿಗೆ ಗುಂಡು ಹಾರಿಸಿದ ಪೊಲೀಸರು.

ಬೆಂಗಳೂರು:ಮಾ-28: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆಗುಂಡಿನ ದಾಳಿ ನಡೆದಿದೆ. ರೌಡಿ ಶೀಟರ್ ಗಳ ವಿರುದ್ಗ ಕಾರ್ಯಾಚರಣೆ ನಡೆಸಿರುವ ಪೊಲೀಸರು ಕುಖ್ಯಾತ ರೌಡಿ ಶೀಟರ್ ನಿರ್ಮಲ್ ಕಾಲಿಗೆ ಗುಂಡು ಹಾರಿಸಿದ್ದಾರೆ.

ಹತ್ಯೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಲ ಅಲಿಯಾಸ್​ ರೂಪೇಶ್​ ಎಂಬ ರೌಡಿಶೀಟರ್ ನನ್ನು ಹುಡುಕುತ್ತದ್ದ ಪೊಲೀಸರಿಗೆ ಆತ ಬೆಂಗಳೂರಿನ ಚಾಮರಾಜಪೇಟೆ ಬಳಿ ಇರುವ ಜಿಂಕೆ ಪಾರ್ಕ್ ಸಮೀಪದ ಪಾಳುಬಿದ್ದ ಮನೆಯಲ್ಲಿ ಅಡಗಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಅಲರ್ಟ್ ಆದ ಕಾಟನ್ ಪೇಟೆ ಪೊಲೀಸರು ಚಾಮರಾಜ ಪೇಟೆ ಪೊಲೀಸರ ನೆರವಿನೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

ನಿರ್ಮಲ್ ನನ್ನು ಬಂಧಿಸಲು ಮುಂದಾದ ವೇಳೆ ಕಾಟನ್​ಪೇಟೆ ಠಾಣೆಯ ಪೇದೆ ಕುಮಾರ್​ಗೆ ಆರೋಪಿ ನಿರ್ಮಲ್ ಚಾಕು ಇರಿದಿದ್ದಾನೆ. ಆರೋಪಿಯನ್ನು ಹಿಡಿಯಲು ಚಾಮರಾಜಪೇಟೆ ಇನ್ಸ್​ಪೆಕ್ಟರ್​ ಪ್ರಶಾಂತ್​ ಹಾಗೂ ಕಾಟನ್​ಪೇಟೆ ಇನ್ಸ್​ಪೆಕ್ಟರ್​ ಕುಮಾರಸ್ವಾಮಿಯಿಂದ ಎರಡು ಸುತ್ತಿನ ಗುಂಡಿನ ದಾಳಿ ನಡೆದಿದೆ. ರೌಡಿಶೀಟರ್​ ಎಡಗಾಲಿಗೆ ಒಂದು ಗುಂಡು ಹೊಕ್ಕಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರೂಪೇಶ್ ಜತೆಯಿದ್ದ ಮತ್ತೊಬ್ಬ ಆರೋಪಿ ಕಿಚ್ಚ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ರೂಪೇಶ್ ಮತ್ತು ಆತನ ಗ್ಯಾಂಗ್ ಅತುಷ್ ಎಂಬಾತನ ಹತ್ಯೆಗೆ ಸಂಚು ರೂಪಿಸಿದ್ದರು. ಅತುಷ್ ಕೂಡ ಕಾಟನ್ ಪೇಟೆ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ರೂಪೇಶ್ ಮೇಲೆ ವಾರಂಟ್ ಜಾರಿ ಮಾಡಿದ್ದರು. ರೂಪೇಶ್​ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Rowdy-sheeter,nirmal aliyas rupesh, bangalore police,police firing

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ