ಬೆಂಗಳೂರು, ಮಾ.28- ಮನೆ ಕೆಲಸ ಮಾಡುವ ಸೋಗಿನಲ್ಲಿ ಮಾಲೀಕರ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಮನೆ ಕೆಲಸದಾಕೆಯನ್ನು ಸಂಜಯನಗರ ಠಾಣೆ
ಪೆÇಲೀಸರು ಬಂಧಿಸಿ 4.80 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಮೂಲತಃ ಕೇರಳದ ತಿರುವನಂತಪುರದ ಅನಿತಾ ಕುಮಾರಿ (47) ಬಂಧಿತ ಆರೋಪಿ. ಭೂಪಸಂದ್ರದ ನಿವಾಸಿ ಡಾ.ಅಮೃತಾ ಶಂಕರ್ ಎಂಬುವರು ತಿರುವನಂತಪುರದಿಂದ ಕಳೆದ ಡಿ.27ರಂದು ಮನೆ ಕೆಲಸಕ್ಕಾಗಿ ಅನಿತಾ ಎಂಬಾಕೆಯನ್ನು ಕರೆದುಕೊಂಡು ಬಂದಿದ್ದು , ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಚಿನ್ನದ ಆಭರಣೆಗಳು ಕಳುವಾಗುತ್ತಿರುವ ಬಗ್ಗೆ ಇವರ ಗಮನಕ್ಕೆ ಬಂದಿದೆ. ಹೀಗೆಯೇ ಮುಂದುವರೆದು ಮಾರ್ಚ್ ಮೊದಲ ವಾರದಲ್ಲಿಯೂ ಸಹ ಸುಮಾರು 4 ಲಕ್ಷ ಬೆಲೆ ಬಾಳುವ ಚಿನ್ನ ಮತ್ತು ಬೆಳ್ಳಿ ಆಭರಣಗಳು ಹಾಗೂ 37,000 ಹಣ ಹಾಗೂ ಇನ್ನಿತರ ವಸ್ತುಗಳು ಕಳುವಾಗಿರುವುದು ಕಂಡು ಬಂದಿದೆ. ಈ ಬಗ್ಗೆ ಅನುಮಾನಗೊಂಡು ಡಾ.ಅಮೃತ್ ಶಂಕರ್ ಅವರು ಕೆಲಸದಾಕೆ ಅನಿತಾಕುಮಾರಿ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸಂಜಯನಗರ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೆÇಲೀಸರು ತನಿಖೆ ನಡೆಸಿ ಅನಿತಾಕುಮಾರಿ ವಾಸವಾಗಿದ್ದ ಮನೆ, ಹಾಗೂ ಈಕೆಯ ಸಂತ ಊರು ಕೇರಳ ಮನೆಯಲ್ಲೂ ತನಿಖೆ ನಡೆಸಿದಾಗ ಈಕೆ ಕಳ್ಳತನ ಮಾಡಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈಕೆಯನ್ನು ಬಂಧಿಸಿ ವಜ್ರದ ಉಂಗುರ , 140 ಗ್ರಾಂ ಚಿನ್ನದ ಆಭರಣಗಳು, 350 ಗ್ರಾಂ ಬೆಳ್ಳಿ ಸಾಮಾನುಗಳು ಮತ್ತು ಇತರೆ ವಸ್ತುಗಳು ಸೇರಿ ಸುಮಾರು 4.80 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.