ರೌಡಿ ಶೀಟರ್‍ನನ್ನು ಹಿಡಿಯಲು ಹೋದ ಪೆÇಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ:

ಬೆಂಗಳೂರು, ಮಾ.28- ಅಪರಾಧ ಚಟುವಟಿಕೆಗಳಲ್ಲಿ ತೊಡಗಿ ತಲೆಮರೆಸಿಕೊಂಡಿದ್ದ ರೌಡಿ ಶೀಟರ್‍ನನ್ನು ಹಿಡಿಯಲು ಹೋದ ಪೆÇಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗುವಾಗ ಇನ್ಸ್‍ಪೆಕ್ಟರ್ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಈ ವೇಳೆ ಎಡಗಾಲಿಗೆ ಗುಂಡೇಟು ತಗುಲಿ ಗಾಯಗೊಂಡಿರುವ ರೌಡಿ ಶೀಟರ್ ರೂಪೇಶ್ ಅಲಿಯಾಸ್ ನಿರ್ಮಲ್‍ನನ್ನು (29) ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈತನಿಂದ ಹಲ್ಲೆಗೊಳಗಾದ ಪೆÇಲೀಸ್ ಕಾನ್‍ಸ್ಟೇಬಲ್‍ಗಳಾದ ಅಬ್ದುಲ್ ರಿಜಮನ್ ಮತ್ತು ಕುಮಾರ್ ಎಂಬುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ವಿವರ: ಹಲವು ಅಪರಾಧಗಳಲ್ಲಿ ಭಾಗಿಯಾಗಿರುವ ಈತ ಕಳೆದ ಮೂರೂವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದು, ನ್ಯಾಯಾಲಯದಿಂದ ವಾರೆಂಟ್ ಕೂಡ ಜಾರಿಯಾಗಿತ್ತು. ಮುಂಜಾನೆ ಈತ ಕಾಟನ್‍ಪೇಟೆ ಬಳಿಯ ಲಿಂಗಾಯತ ಭವನದ ಬಳಿ ಇರುವ ಬಗ್ಗೆ ಮಾಹಿತಿ ಪಡೆದು ಚಾಮರಾಜಪೇಟೆ ಮತ್ತು ಕಾಟನ್‍ಪೇಟೆಯ ಪೆÇಲೀಸರು ಆತನನ್ನು ಹಿಡಿಯಲು ಕಾರ್ಯಾಚರಣೆ ಆರಂಭಿಸಿದರು.
ಪೆÇಲೀಸರನ್ನು ಕಂಡು ಆತ ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸುವ ವೇಳೆ ಶರಣಾಗುವಂತೆ ಪೆÇಲೀಸರು ಸೂಚಿಸಿದ್ದಾರೆ.
ಇದೇ ವೇಳೆ ಆತನನ್ನು ಬೆನ್ನಟ್ಟಿ ಅಬ್ದುಲ್ ಮತ್ತು ಕುಮಾರ್ ಅವರು ಹಿಡಿಯಲು ಮುಂದಾದಾಗ ಮಾರಕಾಸ್ತ್ರಗಳಿಂದ ಅವರ ಮೇಲೆಯೇ ಎರಗಿದ್ದಾನೆ. ತಕ್ಷಣ ಆತ್ಮರಕ್ಷಣೆಗಾಗಿ ಕಾಟನ್‍ಪೇಟೆಯ ಇನ್ಸ್‍ಪೆಕ್ಟರ್ ಕುಮಾರಸ್ವಾಮಿ ಅವರು ತಮ್ಮ ಸಿಬ್ಬಂದಿಗಳ ರಕ್ಷಣೆಗಾಗಿ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದಾಗ ರೌಡಿ ನಿಶಾಂತ್ ಕಾಲಿಗೆ ಒಂದು ಗುಂಡು ತಗುಲಿ ಕುಸಿದು ಬಿದ್ದಿದ್ದಾನೆ. ಈತ ರೌಡಿ ನಿಶಾಂತ್ ಮತ್ತೊಬ್ಬ ರೌಡಿ ಶೀಟರ್ ಅತುಷ್‍ನನ್ನು ಕೊಲೆ ಮಾಡಲು ಇಲ್ಲಿಗೆ ಬಂದಿದ್ದ ಎಂದು ಪೆÇಲೀಸರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ