
ಅಂಕಾರ, ಮಾ.28- ಇರಾಕ್ನ ಕಂದಿಲ್ ಪ್ರಾಂತ್ಯದಲ್ಲಿ ಟರ್ಕಿ ಸೇನೆ ನಡೆಸಿದ ವಾಯು ದಾಳಿಯಲ್ಲಿ 42 ಭಯೋತ್ಪಾದಕರು ಹತರಾಗಿದ್ದು, ಅನೇಕರು ಗಾಯಗೊಂಡಿದ್ಧಾರೆ.
ಕುರ್ದಿಶ್ ವರ್ಕರ್ಸ್ ಪಾರ್ಟಿಗೆ(ಕೆಡಬ್ಲ್ಯಪಿ) ಸೇರಿದ ಉಗ್ರರನ್ನು ಬಂಧಿಸುವಂತೆ ಅಥವಾ ಹೊಡೆದುರುಳಿಸುವಂತೆ ಸರ್ಕಾರ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಉಗ್ರರು ಬಲಿಯಾಗಿದ್ದಾರೆ. ಕೆಡಬ್ಲ್ಯುಪಿ ಮತ್ತು ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಘಟನೆಗೆ ಸೇರಿದ 3,733 ಉಗ್ರರನ್ನು ಈವರೆಗೆ ಹತ್ಯೆ ಮಾಡಿರುವುದಾಗಿ ಟರ್ಕಿ ಸೇನೆ ತಿಳಿಸಿದೆ.