
ಬೆಂಗಳೂರು, ಮಾ.27- ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಯಶವಂತಪುರ ಸಾರಿಗೆ ಕಚೇರಿ ಅಧಿಕಾರಿಗಳ ಕಾರ್ಯಾಚರಣೆ ನಡೆಸಿದ್ದು, ತೆರಿಗೆ ಪಾವತಿಸದೆ ನಗರದಲ್ಲಿ ಸಂಚರಿಸುತ್ತಿದ್ದ ಎರಡು ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿ ಪೆÇೀಲಿಸ್ ವಶಕ್ಕೆ ಒಪ್ಪಿಸಲಾಗಿದೆ.
ಪುದುಚೇರಿಯಲ್ಲಿ ವಾಹನ ನೊಂದಣಿ ಮಾಡಿಕೊಂಡು ಕಳೆದ 8 ವರ್ಷಗಳಿಂದ ಯಾವುದೇ ತೆರಿಗೆ ಪಾವತಿಸದೆ ಬೆಂಗಳೂರಿನಲ್ಲಿ ಓಡಾಡುತ್ತಿದ್ದ ಮರ್ಸಿಡೀಸ್ ಬೆನ್ಜ್ ಕಾರನ್ನು ಜಪ್ತಿ ಮಾಡಲಾಗಿದೆ. ಪಿವೈ01 ಬಿ ಹೆಚ್ 8222 ನೊಂದಣಿ ಸಂಖ್ಯೆಯ ವಾಹನ ಸದಾಶಿವನಗರದಲ್ಲಿ ಸಂಚರಿಸುತ್ತಿರುವಾಗ ಹಿರಿಯ ಮೋಟಾರು ವಾಹನ ತನಿಖಾಧಿಕಾರಿ ರಾಜಣ್ಣ ಅವರು ಜಪ್ತಿ ಮಾಡಿದ್ದಾರೆ.
ಸಂಚಾರ ಪೆÇೀಲೀಸರು ದಾಖಲಿಸಿರುವ ಪ್ರಕರಣಗಳು, ಮಾಲಿನ್ಯ ನಿಯಂತ್ರಣ ಪ್ರಮಾಣಪತ್ತ ಹೀಗೆ ಹಲವು ದಾಖಲೆಗಳನ್ನು ಒಗ್ಗೂಡಿಸಿ ಪರಿಶೀಲಿಸಿದಾದ ಕಳೆದ 8 ವರ್ಷದಿಂದ ವಾಹನ ಕರ್ನಾಟಕದಲ್ಲೇ ಇರುವದು ಖಚಿತವಾಗಿದೆ. ತೆರಿಗೆ ಪಾವತಿಸದ ಹಿನ್ನಲೆಯಲ್ಲಿ ವಾಹನವನ್ನು ಜಪ್ತಿ ಮಾಡಿದ್ದು 18 ಲಕ್ಷ ರೂಪಾಯಿ ತೆರಿಗೆ ಪಾವತಿಸುವಂತೆ ನೋಟೀಸ್ ನೀಡಲಾಗಿದೆ.
ಜುಲೈ 2015 ರಿಂದ ಇದುವರೆಗೂ ತೆರಿಗೆ ಪಾವತಿಸದೇ ಇರುವ ಮರ್ಸಿಡೀಸ್ ಬೆನ್ಜï ಕಾರು ಸಂಖ್ಯೆ ಕೆ ಎ 05 ಟಿ ಎಫ್ 4555 ಮೇಲೆ ಯಶವಂತಪುರ ಸಾರಿಗೆ ಕಚೇರಿಯ ಅಧಿಕಾರಿಗಳು ಚಲನವಲನಗಳನ್ನು ಗಮನಿಸುತ್ತಿದ್ದರು. ದಿನಾಂಕ.21.3.2018ರಂದು ಸರಿಯಾದ ಮಾಹಿತಿ ದೊರಕಿದ ಕಾರಣ ದಾಳಿ ನಡೆಸಿ ಕಾರನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ 20 ಲಕ್ಷ ರೂಪಾಯಿಗಳ ತೆರಿಗೆಯನ್ನು ಪಾವತಿಸುವಂತೆ ನೋಟೀಸ್ ನೀಡಲಾಗಿದೆ.
ನಗರದಲ್ಲಿ ತೆರಿಗೆ ಪಾವತಿಸದೇ ಸಂಚರಿಸುತ್ತಿರುವ ಐಷಾರಾಮಿ ಕಾರುಗಳ ಚಲನ ವಲನಗಳ ಮೇಲೆ ಸಾರಿಗೆ ಇಲಾಖೆ ಗಮನ ಇಟ್ಟಿದ್ದು, ತೆರಿಗೆ ವಂಚಿಸುತ್ತಿರುವ ಜನರ ಮೇಲೆ ದಾಳಿ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.