ವ್ಯಕ್ತಿಯೊಬ್ಬರನ್ನು ಕಾರಿನಲ್ಲಿ ಅಪಹರಿಸಿ ರೆಸಾರ್ಟ್‍ವೊಂದರಲ್ಲಿ ಕೂಡಿ ಹಾಕಿ ಡೆಬಿಟ್ ಕಾರ್ಡ್ ಅನ್ನು ಕಿತ್ತುಕೊಂಡು 2.72 ಲಕ್ಷ ರೂ. ದರೋಡೆ:

ಬೆಂಗಳೂರು, ಮಾ.27- ವ್ಯಕ್ತಿಯೊಬ್ಬರನ್ನು ಕಾರಿನಲ್ಲಿ ಅಪಹರಿಸಿ ರೆಸಾರ್ಟ್‍ವೊಂದರಲ್ಲಿ ಕೂಡಿ ಹಾಕಿ ಡೆಬಿಟ್ ಕಾರ್ಡ್ ಅನ್ನು ಕಿತ್ತುಕೊಂಡು 2.72 ಲಕ್ಷ ರೂ. ಡ್ರಾ ಮಾಡಿ ವಂಚಿಸಿದ್ದ ನಾಲ್ವರು ದರೋಡೆಕೋರರನ್ನು ಕೋಣನಕುಂಟೆ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಮಧುಕಿರಣ್ (32), ಮಂಜುನಾಥ (29), ಆನಂದ (26) ಮತ್ತು ನರೇಂದ್ರ (24) ಬಂಧಿತ ದರೋಡೆಕೋರರಾಗಿದ್ದು , ಇವರಿಂದ 2.30 ಲಕ್ಷ ರೂ. ಹಣ ಡೆಬಿಟ್ ಕಾರ್ಡ್ ಸ್ವೈಪ್ ಮಾಡಿ ಖರೀದಿಸಿದ್ದ 2 ಚಿನ್ನದ ಸರಗಳು , ಒಂದು ಉಂಗುರ , ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮಹೇಂದ್ರ ಟಿಯುವಿ -300 , ಕಾರು , ಬೈಕ್ ಹಾಗೂ ಮೂರು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಯ ವಿವರ: ಮಾ.10ರಂದು ರಾತ್ರಿ 9 ಗಂಟೆಯಲ್ಲಿ ಕೋಡಿ ಚಿಕ್ಕನಹಳ್ಳಿಯ ನಿವಾಸಿ ಪ್ರತಾಪ್ ಎಂಬುವರು ಕೊತ್ತನೂರು ದಿಣ್ಣೆಯ ಆಕ್ಸಿಸ್ ಬ್ಯಾಂಕ್ ಎಟಿಎಂ ಬಳಿ ಹೋಗುತ್ತಿದ್ದಾಗ ಮಹೇಂದ್ರ ಟಿಯುವಿ ಕಾರಿನಲ್ಲಿ ಬಂದ ದರೋಡೆಕೋರರು ಇವರನ್ನು ಅಪಹರಿಸಿ ಬೇಗೂರು ಕೊಪ್ಪ ರಸ್ತೆ, ಮೈಲಸಂದ್ರ ದಿಣ್ಣೆಯಲ್ಲಿರುವ ಐಫೆಲ್ ಗ್ರೀನ್ ರೆಸಾರ್ಟ್‍ಗೆ ಕರೆದೊಯ್ದು ಕೂಡಿ ಹಾಕಿದ್ದರು.
ತದನಂತರ ಪ್ರತಾಪ್ ಅವರ ಬಳಿ ಇದ್ದ ಮೊಬೈಲ್ ಫೆÇೀನ್, 80,000 ಹಣ ಮತ್ತು ಡೆಬಿಟ್ ಕಾರ್ಡ್ ಅನ್ನು ಕಿತ್ತುಕೊಂಡು ಕಾರ್ಡ್‍ನ ಪಿನ್ ನಂಬರ್ ಪಡೆದು ಕರ್ನಾಟಕ ಬ್ಯಾಂಕ್ ಎಟಿಎಂನಿಂದ 95,000 ಡ್ರಾ ಮಾಡಿದ್ದಾರೆ.
ತದನಂತರ ಚುಂಚಘಟ್ಟ ಮುಖ್ಯ ರಸ್ತೆಯ ಮೇಗಾ ಜ್ಯುವೆಲರಿ ಅಂಗಡಿಯಲ್ಲಿ ಆಭರಣಗಳನ್ನು ಖರೀದಿಸಲು 1.50 ಲಕ್ಷ ರೂ.ಗಳನ್ನು ಸ್ವೈಪ್ ಮಾಡಿದ್ದಾರೆ. ಭಾರತ್ ಪೆಟ್ರೋಲ್ ಬಂಕ್‍ನಲ್ಲಿ ಡೆಬಿಟ್ ಕಾರ್ಡ್ ಸ್ವೈಪ್ ಮಾಡಿ 25,000 ಡ್ರಾ ಪಡೆದಿದ್ದರು.
ಒಟ್ಟಾರೆ ಪ್ರತಾಪ್ ಅವರ ಡೆಬಿಟ್ ಕಾರ್ಡ್‍ನಿಂದ 2.72 ಲಕ್ಷ ರೂ.ಗಳನ್ನು ಡ್ರಾ ಮಾಡಿದ ದರೋಡೆಕೋರರು ಪೆÇಲೀಸರಿಗೆ ದೂರು ಕೊಟ್ಟಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ತದನಂತರ ಇವರನ್ನು ಬಿಟ್ಟಿದ್ದರು.
ದರೋಡೆಕೋರರಿಂದ ಅಪಹರಣಕ್ಕೊಳಗಾಗಿ ಬಿಡುಗಡೆಯಾದ ಪ್ರತಾಪ್ ಅವರು ಕೋಣನಕುಂಟೆ ಠಾಣೆಗೆ ದೂರು ನೀಡಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದಕ್ಷಿಣ ವಿಭಾಗದ ಡಿಸಿಪಿ ಡಾ.ಶರಣಪ್ಪ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯಪುರ ಉಪ ವಿಭಾಗದ ಎಸಿಪಿ ಕಾಂತರಾಜ್ ಉಸ್ತುವಾರಿಯಲ್ಲಿ ಇನ್ಸ್‍ಪೆಕ್ಟರ್ ಸದಾನಂದ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಈ ಪ್ರಕರಣವನ್ನು ಬೇಧಿಸಿದ ವಿಶೇಷ ತಂಡವನ್ನು ನಗರ ಪೆÇಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ