ಕ್ಷಿಪಣಿ ಮಾನವ ಹಾಗೂ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಚೀನಾಕ್ಕೆ ಹಠಾತ್ ಭೇಟಿ :

ಬೀಜಿಂಗ್, ಮಾ.27-ಉತ್ತರ ಕೊರಿಯಾದ ಕ್ಷಿಪಣಿ ಮಾನವ ಹಾಗೂ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಚೀನಾಕ್ಕೆ ಹಠಾತ್ ಭೇಟಿ ನೀಡಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ರಾಜಧಾನಿ ಬೀಜಿಂಗ್‍ನಲ್ಲಿ ಇಂದು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಕಿಮ್ ಚೀನಾ ಬೇಟಿ ವರದಿ ಹಿನ್ನೆಲೆಯಲ್ಲಿ ಗಡಿ ಭಾಗ ಸೇರಿದಂತೆ ಸೂಕ್ಷ್ಮ ಸ್ಥಳಗಳಲ್ಲಿ ವ್ಯಾಪಕ ಪೆÇಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಕಿಮ್ ರೈಲಿನಲ್ಲಿ ದಿಢೀರ್ ಬೀಜಿಂಗ್‍ಗೆ ಬಂದಿದ್ಧಾರೆ ಎಂಬ ಮಾಧ್ಯಮ ವರದಿಗಳು ಗೊಂಡಲ ಮೂಡಿಸಿವೆ. ಅವರು ಬೀಜಿಂಗ್ ಬಂದಿರುವುದು ಖಚಿತವಾದರೆ, 2011ರಲ್ಲಿ ಉತ್ತರ ಕೊರಿಯಾ ಅಧಿಕಾರವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಕಿಮ್ ಅವರ ಪ್ರಥಮ ವಿದೇಶಿ ಪ್ರವಾಸ ಇದಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ