ಕೊಲ್ಕತಾ, ಮಾ.27-ರಾಮನವಮಿ ಮೆರವಣಿಗೆ ಹಿನ್ನೆಲೆಯಲ್ಲಿ ಪಶ್ವಿಮ ಬಂಗಾಳದ ವಿವಿಧೆಡೆ ಭುಗಿಲೆದ್ದ ಹಿಂಸಾಚಾರ ಸೋಮವಾರವೂ ಮುಂದುವರಿದಿದ್ದು, ಇನ್ನಿಬ್ಬರು ಹತ್ಯೆಯಾಗಿದ್ದಾರೆ. ಹಿಂಸಾಚಾರ ಮತ್ತು ಘರ್ಷಣೆಯಲ್ಲಿ ಪೆÇಲೀಸರೂ ಸೇರಿದಂತೆ ಹಲವರಿಗೆ ಗಾಯಗಳಾಗಿವೆ. ಇದರೊಂದಿಗೆ ಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ.
ರಾಣಿಗಂಜ್ ಮತ್ತು ಕಾಕಿನಾರ ಪ್ರದೇಶದಲ್ಲಿ ಇಬ್ಬರು ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ.
ಹಿಂಸಾಚಾರದಲ್ಲಿ ತೊಡಗಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪೆÇಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಧರ್ಮದ ಹೆಸರಿನಲ್ಲಿ ಯಾರೇ ಆಗಲಿ ಹಿಂಸಾಚಾರದಲ್ಲಿ ತೊಡಗಿದರೇ ಅವರ ವಿರುದ್ಧ ಉಗ್ರ ಕ್ರಮಗಳನ್ನು ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಪಶ್ಚಿಮಬಂಗಾಳದ ಪುರುಲಿಯಾ ಜಿಲ್ಲೆಯು ಭುರ್ಸಾ ಗ್ರಾಮದಲ್ಲಿ ಘರ್ಷಣೆ ವೇಳೆ ಶೇಖ್ ಶಹಜಹಾನ್ (55) ಎಂಬ ವ್ಯಕ್ತಿಯನ್ನು ಉದ್ರಿಕ್ತ ಗುಂಪು ಹತ್ಯೆ ಮಾಡಿತು.
ಡಿಎಸ್ಪಿ ಸೇರಿದಂತೆ ಹಲವರು ಗಾಯಗೊಂಡಿದ್ದರು. ಘಟನೆ ಸಂಬಂಧ ಹಲವರನ್ನು ಬಂಧಿಸಲಾಗಿದೆ.
ಹಲವೆಡೆ ಘರ್ಷಣೆ: ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ರ್ಯಾಲಿ ವೇಳೆ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ಕೆಲವರು ಗಾಯಗೊಂಡಿದದರು. ಈ ಘಟನೆಯಲ್ಲಿ ಜಗದಾಳ್ ಪ್ರದೇಶದಲ್ಲಿ ಪೆÇಲೀಸ್ ಔಟ್ಪೆÇೀಸ್ಟ್ ಧ್ವಂಸವಾಗಿದೆ.
ಹೂಗ್ಲಿ ಜಿಲ್ಲೆಯ ಚಿನ್ಸುರಾದಲ್ಲೂ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಅಲ್ಲೂ ಕೆಲವರಿಗೆ ಗಾಯಗಳಾಗಿದ್ದವು.