ಬಿಹಾರದ ಔರಂಗಾಬಾದ್‍ನಲ್ಲಿ ರಾಮನವಮಿ ಮೆರವಣಿಗೆ ವೇಳೆ ಭುಗಿಲೆದ್ದ ಕೋಮುಗಲಭೆ:

ಔರಂಗಾಬಾದ್, ಮಾ.27-ಬಿಹಾರದ ಔರಂಗಾಬಾದ್‍ನಲ್ಲಿ ರಾಮನವಮಿ ಮೆರವಣಿಗೆ ವೇಳೆ ಭುಗಿಲೆದ್ದ ಕೋಮುಗಲಭೆಯಲ್ಲಿ ಪೆÇಲೀಸರೂ ಸೇರಿದಂತೆ 60 ಮಂದಿ ತೀವ್ರ ಗಾಯಗೊಂಡಿದ್ದಾರೆ. ಉದ್ರಿಕ್ತ ಗುಂಪು 50ಕ್ಕೂ ಹೆಚ್ಚು ಅಂಗಡಿಗಳಿಗೆ ಬೆಂಕಿ ಹಚ್ಚಿದೆ. ಹಿಂಸಾಚಾರ ನಿಯಂತ್ರಿಸಲು ಆ ಪ್ರದೇಶದಲ್ಲಿ ಕಫ್ರ್ಯೂ ಜಾರಿಗೊಳಿಸಲಾಗಿದೆ.

ಔರಂಗಾಬಾದ್‍ನ ಹಳೆ ಜಿಟಿ ರಸ್ತೆಯ ಪ್ರಾರ್ಥನಾ ಮಂದಿರವೊಂದರ ಸಮೀಪ ಎರಡು ಕೋಮುಗಳ ಮಧ್ಯೆ ಘರ್ಷಣೆ ಭುಗಿಲೆದ್ದಿತು.
ಉದ್ರಿಕ್ತ ಗುಂಪನ್ನು ಚದುರಿಸಲು ಪೆÇಲೀಸರು ಮುಂದಾದಾಗ ಅವರೊಂದಿಗೆ ಘರ್ಷಣೆಗೆ ಇಳಿದ ಗಲಭೆಕೋರರು ಕೆಲವರನ್ನು ಗಾಯಗೊಳಿಸಿದರು.
ಘರ್ಷಣೆಯಲ್ಲಿ ಪ್ರಾರ್ಥನಾ ಮಂದಿರ ಬಳಿ ಇದ್ದ 50ಕ್ಕೂ ಹೆಚ್ಚು ಅಂಗಡಿಗಳು ಭಸ್ಮವಾಗಿವೆ.

ಹಿಂಸಾಚಾರ ನಿಯಂತ್ರಿಸಲು ಕಂಡಲ್ಲಿ ಗುಂಡಿಕ್ಕಲು ಆದೇಶಿಸಲಾಗಿದೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ