
ಮಂಡ್ಯ, ಮಾ.27-ದೊಡ್ಡಿಗೆ ನುಗ್ಗಿ ನಾಯಿಗಳು ದಾಳಿ ಮಾಡಿದ್ದರಿಂದ ಎರಡು ಕುರಿಗಳು ಮೃತಪಟ್ಟು, ಐದು ಕುರಿಗಳು ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಹಳವಾಡಿ ಗ್ರಾಮದಲ್ಲಿ ನಡೆದಿದೆ.
ಮಂಡ್ಯ ತಾಲ್ಲೂಕು ಹಳವಾಡಿ ಗ್ರಾಮದ ಪುಟ್ಟೇಗೌಡರಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ಐದು ಕುರಿಗಳು ಚಿಂತಾಜನಕ ಸ್ಥಿತಿಯಲ್ಲಿದ್ದು, ಉಳಿದವು ಕೂಡ ಗಂಭೀರವಾಗಿ ಗಾಯಗೊಂಡಿವೆ.
ಬೆಳಗ್ಗೆ ನಾಲ್ಕು ಗಂಟೆಯಲ್ಲಿ ನಾಲ್ಕು ನಾಯಿಗಳು ದೊಡ್ಡಿಗೆ ನುಗ್ಗಿ ಎಲ್ಲ ಕುರಿಗಳನ್ನು ಕಚ್ಚಿವೆ. ಜೀವನಕ್ಕೆ ಕುರಿಗಳೇ ಆಧಾರವಾಗಿದ್ದು, ಸರ್ಕಾರ ಪರಿಹಾರ ನೀಡಬೇಕೆಂದು ಪುಟ್ಟೇಗೌಡ ಒತ್ತಾಯಿಸಿದ್ದಾರೆ.