ಭಾರತ ಹಾಗೂ ಜಪಾನ್ ನಿಂದಲೂ ಹೂಡಿಕೆಗೆ ಆಹ್ವಾನ ನೀಡಿದ ಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ

ಕೊಲಂಬೊ:ಮಾ-27: ಮೂಲಸೌಕರ್ಯ ಯೋಜನೆಗಳಿಗೆ ಲಂಕಾ ಚೀನಾದ ಆರ್ಥಿಕ ನೆರವಿನ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ ಎಂಬ ಟೀಕೆಗಳು ಬಂದ ಬೆನ್ನಲ್ಲೆ ಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಈಗ ಭಾರತ ಹಾಗೂ ಜಪಾನ್ ನಿಂದಲೂ ಆರ್ಥಿಕ ನೆರವು, ವಿದೇಶಿ ಬಂಡವಾಳ ಹೂಡಿಕೆಯನ್ನು ಕೋರಿದ್ದಾರೆ.

ಕೊಲಂಬೋದಲ್ಲಿ ನೀಡಿರುವ ಸಂದರ್ಶನದಲ್ಲಿ ಹ್ಯಾಂಬಂಟೊಟ ಬಂದರಿನ ನಿರ್ವಹಣೆಯ ಹಕ್ಕನ್ನು ಚೀನಾಗೆ ನೀಡಿರುವುದನ್ನು ರನಿಲ್ ವಿಕ್ರಮ ಸಿಂಘೆ ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ ಲಂಕಾದಲ್ಲಿ ಬಂಡವಾಳ ಹೂಡಲು  ಭಾರತ, ಜಪಾನ್ ಹಾಗೂ ಚೀನಾ ದೇಶಗಳನ್ನು ಎದುರು ನೋಡುತ್ತಿದ್ದೇವೆ, ನಂತರದ ದಿನಗಳಲ್ಲಿ ಯುರೋಪ್ ರಾಷ್ಟ್ರಗಳಿಗೂ ಆಹ್ವಾನ ನೀಡಲಾಗುವುದು ಎಂದು ಹೇಳಿದ್ದಾರೆ.

ಶ್ರೀಲಂಕಾದಲ್ಲಿನ ಮೂಲಸೌಕರ್ಯ ಯೋಜನೆಗಳಲ್ಲಿ ಚೀನಾದ ಸಹಕಾರ ಹಾಗೂ ಪ್ರಾಬಲ್ಯ ಹೆಚ್ಚಾಗುತ್ತಿರುವುದು ಭಾರತದ ಹಿತದೃಷ್ಟಿಯಿಂದ ಆತಂಕಕ್ಕೆ ಕಾರಣವಾಗಿತ್ತು. ಈಗ ಚೀನಾದೊಂದಿಗೆ ಸಮತೋಲನ ಕಾಯ್ದುಕೊಳ್ಳಲು ಭಾರತ ಹಾಗೂ ಜಪಾನ್ ನಿಂದ ಶ್ರೀಲಂಕಾ ಪ್ರಧಾನಿ  ಹೂಡಿಕೆಗಾಗಿ ಆಹ್ವಾನ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ