ನವದೆಹಲಿ: 2002ರ ಸುಲಿಗೆ ಪ್ರಕರಣ ಸಂಬಂಧ ಭೂಗತ ಪಾತಕಿ ಅಬು ಸಲೇಂ ವಿರುದ್ಧ ದಾಖಲಾಗಿರುವ ಪ್ರಕರಣದ ಅಂತಿಮ ವಿಚಾರಣೆ ಇಂದು ದೆಹಲಿಯ ಪಟಿಯಾಲ ಕೋರ್ಟ್ನಲ್ಲಿ ನಡೆಯಲಿದೆ.
ಕಳೆದ ತಿಂಗಳು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ಸ್ಟರ್ ಅಬುಸಲೇಂ ವಿರುದ್ಧ ಕೋರ್ಟ್ ವಾರಂಟ್ ಸಹ ಜಾರಿ ಮಾಡಿತ್ತು. ತೈಲ ಉತ್ಪನ್ನಗಳ ಉದ್ಯಮಿ, ದಿಲ್ಲಿ ಮೂಲದ ಅಶೋಕ್ ಗುಪ್ತ ಎಂಬುವವರು ಅಬು ಸಲೇಂ ವಿರುದ್ಧ ಕೇಸು ದಾಖಲಿಸಿದ್ದರು. ವಸೂಲಿ ಪ್ರಕರಣ ಸೇರಿದಂತೆ ಒಟ್ಟು ಎಂಟು ಪ್ರಕರಣಗಳ ಆರೋಪ ಎದುರಿಸುತ್ತಿರುವ ಅಬು ಸಲೇಂ ನನ್ನು 2005 ನವೆಂಬರ್ 11ರಂದು ಪೋರ್ಚುಗಲ್ನಿಂದ ಭಾರತಕ್ಕೆ ಗಡೀಪಾರು ಮಾಡಲಾಗಿದ್ದು, 2007ರಲ್ಲಿ ಆತನನ್ನು ಬಂಧಿಸಲಾಗಿತ್ತು.
ಸಲೇಂ ಪ್ರಸ್ತುತ 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ನವಿ ಮುಂಬೈ ತಲೊಜಾ ಜೈಲಿನಲ್ಲಿ ಜೈಲುವಾಸ ಅನುಭವಿಸುತ್ತಿದ್ದಾನೆ.