ಬಿಹಾರದ ಭೋಜ್‍ಪುರ್ ಜಿಲ್ಲೆಯಲ್ಲಿ ಅಪಘಾತ ಪತ್ರಕರ್ತ ಸೇರಿ ಇಬ್ಬರು ಸಾವು:

ಅರಾ, ಮಾ.26-ಬಿಹಾರದ ಭೋಜ್‍ಪುರ್ ಜಿಲ್ಲೆಯಲ್ಲಿ ನಿನ್ನೆ ಮಧ್ಯರಾತ್ರಿ ಅಪಘಾತದಲ್ಲಿ ಸ್ಥಳೀಯ ಪತ್ರಕರ್ತ ಸೇರಿದಂತೆ ಇಬ್ಬರು ಮೃತಪಟ್ಟಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ನಾಶಿ ಗ್ರಾಮದಲ್ಲಿ ಪತ್ರಕರ್ತ ನವೀನ್ ಮತ್ತು ಅವರ ಸ್ನೇಹಿತ ವಿಜಯ್ ಸಿಂಗ್ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಕಾರೊಂದು ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟರು. ಈ ಘಟನೆಯಿಂದ ಕುಪಿತರಾದ ಗ್ರಾಮಸ್ಥರು ಕಾರನ್ನು ಬೆನ್ನಟ್ಟಿ ತಡೆದರೂ, ಅದರಲ್ಲಿದ್ದವರು ಪರಾರಿಯಾಗಿದ್ದಾರೆ. ಸ್ಥಳೀಯರು ವಾಹನಕ್ಕೆ ಬೆಂಕಿ ಹಚ್ಚಿದರು. ಇದು ಅಪಘಾತವಲ್ಲ ಕೊಲೆ ಎಂದು ಆರೋಪಿಸಿರುವ ಪತ್ರಕರ್ತನ ಕುಟುಂಬದ ಸದಸ್ಯರು ಇದರ ಹಿಂದೆ ಮಾಜಿ
ಸರಪಂಚ್ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ