ಕೋಲಾರ, ಮಾ.26-ಬೆಂಗಳೂರಿನ ಕಾಚರಕನಹಳ್ಳಿಯ ಕೋದಂಡರಾಮ ದೇವಾಲಯದಲ್ಲಿ ಪ್ರತಿಷ್ಠಾಪಿಸಲು ಸುಮಾರು 62 ಅಡಿ ಉದ್ದದ ಹನುಮನ ವಿಗ್ರಹವನ್ನು ಕೋಲಾರದಲ್ಲಿ ಸಿದ್ಧಪಡಿಸಿದ್ದು, ಇಂದು ಬೃಹತ್ ವಾಹನದಲ್ಲಿ ಸಾಗಿಸಲಾಯಿತು.
ವಿಶ್ವದಲ್ಲೇ ಎತ್ತರವಾದ ಏಕಶಿಲೆಯ ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲಾದ ಬೃಹತ್ ಹನುಮನ ವಿಗ್ರಹವನ್ನು ಮುಳಬಾಗಿಲು ತಾಲೂಕಿನ ಶಿವಾರಪಟ್ಟಣ ರಾಜಶೇಖರಚಾರ್ಯ ಅವರು ಸತತ ಮೂರು ವರ್ಷಗಳಿಂದ ಕೆತ್ತನೆ ಕೆಲಸ ಮಾಡಿ ಪೂರ್ಣಗೊಳಿಸಿದ್ದಾರೆ.
ಈ ಬೃಹತ್ ಗಾತ್ರದ ವಿಗ್ರಹವನ್ನು ಕೋಲಾರದಿಂದ ಬೆಂಗಳೂರಿಗೆ ಸಾಗಿಸಲು ಸುಮಾರು 10 ದಿನಗಳು ಬೇಕಾಗಿದ್ದು, ಸಾಗಾಣಿಕಾ ವೆಚ್ಚವೇ ಸುಮಾರು 2ಕೋಟಿ ರೂ. ಆಗಲಿದೆ.