ಬೆಳಗಾವಿ, ಮಾ.26-ಆಕಸ್ಮಿಕ ಬೆಂಕಿಗೆ ಏಳು ಗುಡಿಸಲುಗಳು ಭಸ್ಮವಾದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಗುಜನಾಳ್ ಗ್ರಾಮದಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ ಒಂದು ಗಂಟೆ ಸುಮಾರಿಗೆ ಅಪ್ಪಣ್ಣಾ ಹಳಬರ್ ಎನ್ನುವವರ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿದೆ. ಅಲ್ಲಿಂದ ಉಳಿದ ಗುಡಿಸಲುಗಳಿಗೂ ಬೆಂಕಿ ತಗುಲಿದೆ.
ಪರಿಣಾಮ ಏಳು ಗುಡಿಸಲುಗಳು ಬೆಂಕಿಯಲ್ಲಿ ಭಸ್ಮವಾಗಿದ್ದು, ಮೂರು ಹೋರಿ, ಹದಿನೆಂಟು ಆಡುಗಳು ಸೇರಿದಂತೆ ನಗದು, ಬಂಗಾರ ಸೇರಿ ಮನೆಯ ಎಲ್ಲಾ ಮನೆಯ ವಸ್ತುಗಳು ಬೆಂಕಿಗಾಹುತಿಯಾಗಿವೆ. ಒಟ್ಟು ಸುಮಾರು ಹತ್ತು ಲಕ್ಷ ಮೌಲ್ಯದಷ್ಟು ನಷ್ಟವುಂಟಾಗಿದ್ದು, ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿವೆ.
ಈ ಸಂಬಂಧ ಅಂಕಲಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ