
ನವದೆಹಲಿ:ಮಾ-25: ಜಮ್ಮು-ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ಥಾನ ಹಾರಿಸುವ ಒಂದು ಗುಂಡಿಗೆ ಪ್ರತ್ಯುತ್ತರವಾಗಿ ಒಂದು ಬಾಂಬ್ ಹಾರಿಸಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹೇಳಿಕೆ ನೀಡಿದ್ದಾರೆ.
ನಮ್ಮ ಸೈನಿಕರು ಪಾಕಿಸ್ತಾನಕ್ಕೆ ಗುಂಡಿಗೆ ಪ್ರತಿಯಾಗಿ ಬಾಂಬ್‌ನ ಉತ್ತರ ನೀಡಬೇಕು. ಹೀಗೆ ಮಾಡುವುದರಿಂದ ಮಾತ್ರ ಗಡಿಯಾಚೆಗಿನ ಭಯೋತ್ಪಾದನೆಯನ್ನು ಮಟ್ಟ ಹಾಕಲು ಸಾಧ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಗುಂಡು ಮತ್ತು ಬಾಂಬ್‌ಗಳು ಸಿಡಿಯುತ್ತಿರುವ ವೇಳೆಯಲ್ಲಿ ಶಾಂತಿ ಮಾತುಕತೆ ನಡೆಸುವುದು ಅಸಾಧ್ಯವಾದ ಮಾತು ಎಂದು ಶಾ ಇದೇವೇಳೆ ಹೇಳಿದ್ದಾರೆ.