ಮುಂಬೈ ದಾಳಿಯ ಕುರಿತು ಮಹತ್ವದ ಮಾಹಿತಿ ಬಹಿರಂಗಗೊಳಿಸಿದ ಮಹಾ ಸರ್ಕಾರದ ವಿಶೇಷ ಅಭಿಯೋಜಕ ಉಜ್ವಲ್ ನಿಕ್ಕಂ

ಬೆಳಗಾವಿ:ಮಾ-25: 26/11ರ ಮುಂಬೈ ದಾಳಿ ಬಗ್ಗೆ  ಮಹಾರಾಷ್ಟ್ರ ಸರ್ಕಾರದ ವಿಶೇಷ ಅಭಿಯೋಜಕ ಉಜ್ವಲ್ ನಿಕ್ಕಂ ಮಹತ್ವ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಮುಂಬೈ ದಾಳಿ ವೇಳೆ ಪಾಕಿಸ್ತಾನದಲ್ಲಿ ಒಂದು ಕಂಟ್ರೋಲ್ ರೂಮ್ ತೆರೆಯಲಾಗಿತ್ತು. ಮುಂಬೈನಲ್ಲಿ ದಾಳಿ ಮಾಡುತ್ತಿದ್ದ ಉಗ್ರರಿಗೆ ಕಂಟ್ರೋಲ್ ರೂಮ್‌‌ನಿಂದಲೇ ಸೂಚನೆಗಳನ್ನು ನೀಡುತ್ತಿದ್ದರು. ಹೀಗೆ ಕಂಟ್ರೋಲ್ ರೂಮ್ ನಿಂದ ಸೂಚನೆ ನೀಡಿಉತ್ತಿರುವ ಬಗೆಗಿನ ಎಲ್ಲಾ  ಸಂಭಾಷಣೆಗಳು ಸಿಕ್ಕಿವೆ ಎಂದು ಹೇಳಿದ್ದಾರೆ.

ಅಲ್ಲದೇ ಪಾಕಿಸ್ತಾನದ ಕರಾಚಿಯ ಕಂಟ್ರೋಲ್ ರೂಮ್‌ನಲ್ಲಿದ್ದ ಓರ್ವ ಆರೋಪಿ ಮಹಾರಾಷ್ಟ್ರದವನಾಗಿದ್ದಾನೆ. ಅವನ ವಿಚಾರಣೆ ನಡೆಯುತ್ತಿದ್ದು, ಅತೀ ಶೀಘ್ರ ಇದರ ತೀರ್ಪು ಬರಲಿದೆ ಎಂದರು. ಈತನ  ಹೆಸರು ಅಬು ಜಿಂದಾಲ್. ಈ ಅಬು ಜಿಂದಾಲ್ ಪಾಕಿಸ್ತಾನದ ಉಗ್ರರಿಗೆ ಹಿಂದಿ ಭಾಷೆ ಹೇಳಿ ಕೊಡುತ್ತಿದ್ದ. ಮುಂಬೈ ದಾಳಿ ವೇಳೆ ಭಾರತದ ಕೆಲವು ಟಿವಿ ಚಾನಲ್‌ಗಳಿಗೆ ಫೋನ್ ಮಾಡಿ, ಡಿಮ್ಯಾಂಡ್ ಮಾಡಿದ್ದರು. ಟಿವಿ ಚಾನಲ್‌ನವರಿಗೆ ಹಿಂದಿಯಲ್ಲಿ ಏನು ಹೇಳಬೇಕು ಎಂಬುವುದನ್ನು ಪಾಕಿಸ್ತಾನದ ಉಗ್ರರಿಗೆ ಈ ಅಬು ಜಿಂದಾಲ್ ಕಲಿಸುತ್ತಿದ್ದ ಎಂದು ತಿಳಿಸಿದ್ದಾರೆ.

ಇದೇ ವೇಳೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಶರಣಾಗತಿ ವಿಚಾರವನ್ನು ಉಜ್ವಲ್ ನಿಕ್ಕಂ ತಳ್ಳಿ ಹಾಕಿದ್ದಾರೆ. ದಾವುದ್ ಖಡಾಖಂಡಿತವಾಗಿ ಶರಣಾಗತಿ ಆಗೋದಿಲ್ಲ‌. ಇದು ಕೇವಲ ಸುಳ್ಳಿನ ಕಥೆ. ದಾವೂದ್ ಇಬ್ರಾಹಿಂಗೆ ಪಾಕಿಸ್ತಾನ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ