ಬೆಂಗಳೂರು,ಮಾ.26-ರಸ್ತೆಯಲ್ಲಿ ಹಾಗೂ ಬ್ಯಾಂಕ್ಗಳ ಬಳಿ ಹಣ ಬೀಳಿಸಿ ಸಾರ್ವಜನಿಕರ ಗಮನ ಸೆಳೆದು ವಂಚಿಸುತ್ತಿದ್ದ ಇಬ್ಬರು ಮಹಿಳೆಯರು ಸೇರಿ ಐದು ಮಂದಿ ಆರೋಪಿಗಳನ್ನು ದಕ್ಷಿಣ ವಿಭಾಗದ ಗಿರಿನಗರ ಪೆÇಲೀಸರು ಬಂಧಿಸಿ 10.47 ಲಕ್ಷ ರೂ. ಮೌಲ್ಯದ 349 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆಯ ಮಂಜುನಾಥ್(27), ಸಂತೋಷ(24), ರಮೇಶ(22), ಗಿರಿಜಮ್ಮ(38) ಮತ್ತು ಮಂಜುಳ(23) ಬಂಧಿತ ಆರೋಪಿಗಳು.
ಈ ವಂಚಕರು ಮಾಲ್ಗಳ ಬಳಿ, ಕಾಂಪ್ಲೆಕ್ಸ್ , ಜನಸಂದಣಿ ಹೆಚ್ಚಾಗಿರುವ ಪ್ರದೇಶಗಳಲ್ಲಿ, ಕಾರು ಪಾರ್ಕಿಂಗ್ ಸ್ಥಳ, ಬ್ಯಾಂಕ್ಗಳ ಬಳಿ ಹೊಂಚು ಹಾಕಿ ಹಣವನ್ನು ರಸ್ತೆಯಲ್ಲಿ ಬೀಳಿಸಿ ಬ್ಯಾಂಕ್ನಿಂದ ಹೊರಬರುವ ವ್ಯಕ್ತಿಗಳ ಗಮನ ಸೆಳೆದು ಅವರಿಂದ ಹಣ ದೋಚಿ ಪರಾರಿಯಾಗುತ್ತಿದ್ದರು. ಒಬ್ಬಾತ ಸಾರ್ವಜನಿಕರ ಗಮನ ಸೆಳೆದರೆ , ಜೊತೆಯಲ್ಲಿದ್ದವರು ಈತನಿಗೆ ಸಹಕರಿಸಿ ಬೆಲೆ ಬಾಳುವ ವಸ್ತುಗಳನ್ನು ಎಗರಿಸಿ ಪರಾರಿಯಾಗುತ್ತಿದ್ದರು. ಅಲ್ಲದೆ ಒಂಟಿಯಾಗಿ ಓಡಾಡುವ ಮಹಿಳೆಯರ ಮುಂದೆ ಹಣ ಬೀಳಿಸಿ ಹಣ ಬಿದ್ದಿದೆ ಎಂದು ಅವರ ಗಮನ ಸೆಳೆದು ಆಭರಣಗಳನ್ನು ಎಗರಿಸುತ್ತಿದ್ದರು. ಜನನಿಬಿಡ ಪ್ರದೇಶಗಳಲ್ಲಿ ವಯಸ್ಸಾದ ಮಹಿಳೆಯರ ಗಮನ ಸೆಳೆಯುವುದು ಹಾಗೂ ಆಟೋ ರಿಕ್ಷಾದಲ್ಲಿ ಡ್ರಾಪ್ ಕೊಡುವುದಾಗಿ ಪ್ರಯಾಣಿಕರಿಂದ ಹಣ ಆಭರಣ ದೋಚುತ್ತಿದ್ದರು.
ಮಹಿಳೆಯರೇ ಟಾರ್ಗೆಟ್:
ದೇವಸ್ಥಾನದ ಬಳಿ ಹಣವನ್ನು ಬೀಳಿಸಿ ನಂತರ ನಮಗೆ ಹಣ ಸಿಕ್ಕಿದೆ ಎಂದು ಹೇಳಿ, ಒಂಟಿಯಾಗಿ ಬರುವ ಮಹಿಳೆಗೆ ನಾವಿಬ್ಬರು ಹಣ ಹಂಚಿಕೊಳ್ಳೋಣವೆಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅವರ ಗಮನ ಸೆಳೆದು ಸರಗಳನ್ನು ಎಗರಿಸುತ್ತಿದ್ದರು.
ಅಲ್ಲದೆ ದೇವಸ್ಥಾನದ ಬಳಿ ಭಕ್ತಾಧಿಗಳ ಸಾಲಿನಲ್ಲಿ ನಿಂತುಕೊಂಡು ಮಹಿಳೆಯರ ಸರಗಳನ್ನು ಕಳವು ಮಾಡುತ್ತಿದ್ದ ಈ ತಂಡ ಆಟೋ ರಿಕ್ಷಾದಲ್ಲಿ ಬಂದು ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುವ ಮಹಿಳೆಯರನ್ನು ವಿಚಾರಿಸಿ ನಾವು ಸಹ ಅಲ್ಲಿಗೆ ಹೋಗುತ್ತೇವೆ ಎಂದು ಹೇಳಿ ತಮ್ಮ ಜೊತೆ ಹತ್ತಿಸಿಕೊಂಡು ಮಾರ್ಗ ಮಧ್ಯೆ ಅವರನ್ನು ಬೆದರಿಸಿ ಚಿನ್ನದ ಸರಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿತ್ತು.
ಈ ವ್ಯಾಪ್ತಿಯಲ್ಲಿ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿತ್ತು.
ಈ ತಂಡ ಕಾರ್ಯಾಚರಣೆ ನಡೆಸಿ ಇಬ್ಬರುಮಹಿಳೆಯರು ಸೇರಿದಂತೆ ಐದು ಮಂದಿಯನ್ನು ಬಂಧಿಸಿದ್ದು , ತಲೆಮರೆಸಿಕೊಂಡಿರುವ ಧನೇಂದ್ರ ಮತ್ತು ರೇಖಾ ಎಂಬುವವರಿಗಾಗಿ ತನಿಖೆ ಮುಂದುವರೆದಿದೆ. ಆರೋಪಿಗಳ ಬಂಧನದಿಂದ ಜೆಪಿನಗರ, ಗಿರಿನಗರ, ಕೆಜಿನಗರ, ಶಂಕರಪುರ, ವಿವಿಪುರ ಠಾಣೆಗಳ ಒಟ್ಟು ಎಂಟು ಪ್ರಕರಣಗಳು ಪತ್ತೆಯಾಗಿದ್ದು, 10.47 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ದಕ್ಷಿಣ ವಿಭಾಗದ ಉಪ ಪೆÇಲೀಸ್ ಆಯುಕ್ತ ಡಾ.ಶರಣಪ್ಪ , ಸಹಾಯಕ ಪೆÇಲೀಸ್ ಕಮೀಷನರ್ ಮಹಾಂತ ರೆಡ್ಡಿ , ಇನ್ಸ್ಪೆಕ್ಟರ್ ಕೊಟ್ರೇಶಿ ಅವರನ್ನೊಳಗೊಂಡ ಈ ಕಾರ್ಯಾಚರಣೆ ನಡೆಸಿತ್ತು.