ರಾಮನವಮಿ ಉತ್ಸವದ ಸಂಭ್ರಮಾಚರಣೆಯಲ್ಲಿ ಕೊಲೆ:

ಕೊಲ್ಕತಾ, ಮಾ.26-ರಾಮನವಮಿ ಉತ್ಸವದ ಸಂಭ್ರಮಾಚರಣೆ ಒಬ್ಬನ ಕೊಲೆಯಲ್ಲಿ ಪರ್ಯಾವಸನವಾದ ಘಟನೆ ಪಶ್ಚಿಮಬಂಗಾಳದ ಪುರುಲಿಯಾ ಜಿಲ್ಲೆಯ ಭುರ್ಸಾ ಗ್ರಾಮದಲ್ಲಿ ನಿನ್ನೆ ನಡೆದಿದೆ. ಘರ್ಷಣೆ ವೇಳೆ ಡಿಎಸ್‍ಪಿ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಕೆಲವರನ್ನು ಬಂಧಿಸಲಾಗಿದೆ.
ಗ್ರಾಮದಲ್ಲಿ ನಿನ್ನೆ ಬಿಜೆಪಿ ನೇತೃತ್ವದ ರಾಮನವಮಿ ಮೆರವಣಿಗೆಗೆ ಪೆÇಲೀಸರು ಅನುಮತಿ ನೀಡಿದ್ದರು. ಆದರೆ ನಿಗದಿತ ಮಾರ್ಗದ ಬದಲಿಗೆ ಬೇರೆ ದಾರಿಯಲ್ಲಿ ಮೆರವಣಿಗೆ ಸಾಗಿತ್ತು. ಈ ಸಂದರ್ಭದಲ್ಲಿ ಕೆಲವು ದುಷ್ಮರ್ಮಿಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿದಾಗ ಘರ್ಷಣೆ ಭುಗಿಲೆದ್ದಿತು. ಈ ಘಟನೆಯಲ್ಲಿ ಅದೇ ಗ್ರಾಮದ ಶೇಖ್ ಶಹಜಹಾನ್ (55) ಎಂಬ ವ್ಯಕ್ತಿಯನ್ನು ಉದ್ರಿಕ್ತ ಗುಂಪು ಹತ್ಯೆ ಮಾಡಿತು. ಹಿಂಸಾಚಾರ ನಿಯಂತ್ರಣಕ್ಕೆ ಮುಂದಾದ ಡಿಎಸ್‍ಪಿ ಸುಬ್ರತಾ ಕುಮಾರ್ ಪಾಲ್ ಸೇರಿದಂತೆ ಐವರು ಪೆÇಲೀಸರು ಮತ್ತು ಗಲಭೆಕೋರರು ಗಾಯಗೊಂಡರು. ಘರ್ಷಣೆ ಮತ್ತು ಹಿಂಸಾಚಾರದ ಆರೋಪದ ಮೇಲೆ 17 ಜನರನ್ನು ಪೆÇಲೀಸರು ಬಂಧಿಸಿದ್ದಾರೆ.
ಹಲವೆಡೆ ಘರ್ಷಣೆ : ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ರ್ಯಾಲಿ ವೇಳೆ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ಕೆಲವರು ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಜಗದಾಳ್ ಪ್ರದೇಶದಲ್ಲಿ ಪೆÇಲೀಸ್ ಔಟ್‍ಪೆÇೀಸ್ಟ್ ಧ್ವಂಸವಾಗಿದೆ. ಹೂಗ್ಲಿ ಜಿಲ್ಲೆಯ ಚಿನ್ಸುರಾದಲ್ಲೂ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಅಲ್ಲೂ ಕೆಲವರಿಗೆ ಗಾಯಗಳಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ