ನವದೆಹಲಿ:ಮಾ-25: ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಉಡಾವಣೆ ಮುಂದೂಡಲಾಗಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಇಸ್ರೋ ಮುಖ್ಯಸ್ಥರು ಹೇಳಿದ್ದಾರೆ.
ಈ ಮೊದಲು ಏ.23 ಕ್ಕೆ ಉಡಾವಣೆಯ ದಿನಾಂಕ ನಿಗದಿಯಾಗಿತ್ತು. ಆದರೆ ಈಗ ಅದನ್ನು ಅಕ್ಟೋಬರ್ ಮೊದಲನೇ ವಾರಕ್ಕೆ ಮುಂದೂಡಲಾಗಿದೆ. ನಮ್ಮ ಸಿದ್ಧತೆಗಳಿಗೆ ಇಸ್ರೋದ ಮಾಜಿ ಅಧ್ಯಕ್ಷರು, ಬಾಹ್ಯಾಕಾಶ ತಜ್ಞರು, ಐಐಟಿ ಪ್ರಾಧ್ಯಾಪಕರು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಸಂಕೀರ್ಣತೆಗಳನ್ನು ಗಮನದಲ್ಲಿಟ್ಟುಕೊಂಡು ದಿನಾಂಕವನ್ನು ಮುಂದೂಡಲಾಗಿದೆ ಎಂದು ಇಸ್ರೋ ಅಧ್ಯಕ್ಷ ಡಾ. ಕೆ ಶಿವನ್ ಹೇಳಿದ್ದಾರೆ.
ಚಂದ್ರಯಾನ-2 ಉಡಾವಣೆಗೆ ಕೆಲವೊಂದು ಪರೀಕ್ಷೆಗಳು ಇನ್ನೂ 20 ದಿನಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ ಈ ಹಿನ್ನೆಲೆಯಲ್ಲಿ ದಿನಾಂಕವನ್ನು ಅಕ್ಟೋಬರ್ ಗೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.