ಹಿಜ್ಬುಲ್​ ಮುಜಾಹಿದೀನ್ ಉಗ್ರ ಸಂಘಟನೆ ಸೇರಿದ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕನ ಪುತ್ರ

ಶ್ರೀನಗರ:ಮಾ-25: ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಮೊಹಮ್ಮದ್​ ಅಶ್ರಫ್​ ಸೆಹರಾಯ್​ ಅವರ ಪುತ್ರ ಹಿಜ್ಬುಲ್​ ಮುಜಾಹಿದೀನ್​ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದಾನೆ.

26 ವರ್ಷದ ಜುನೈದ್​ ಅಶ್ರಫ್​ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದು, ಈತ ಕಾಶ್ಮೀರ ವಿಶ್ವವಿದ್ಯಾಲಯದಿಂದ MBA ಪದವಿ ಪಡೆದಿದ್ದ. ಹಿಜ್ಬುಲ್​ ಮುಜಾಹಿದೀನ್​ ಸಂಘಟನೆ ಈತನಿಗೆ ಅಮರ್​ ಭಾಯ್​ ಎಂಬ ಕೋಡ್​ ನೇಮ್​ ನೀಡಿದೆ. ಎಕೆ 47 ರೈಫಲ್​ ಹಿಡಿದಿರುವ ಅವನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಜುನೈದ್ ಅಶ್ರಫ್​ ಕಾಣೆಯಾಗಿದ್ದಾನೆ ಎಂದು ಆತನ ತಂದೆ ಶುಕ್ರವಾರ ದೂರು ದಾಖಲಿಸಿದ್ದರು. ಅದರ ಮಾರನೇ ದಿನವೇ ಆತ ಉಗ್ರ ಸಂಘಟನೆಗೆ ಸೇರಿರುವ ಸುದ್ದಿ ಬಹಿರಂಗಗೊಂಡಿದೆ.

ಜುನೈದ್​ ಅಶ್ರಫ್​ನ ತಂದೆ ಮೊಹಮ್ಮದ್​ ಅಶ್ರಫ್​ ಸೆಹರಾಯ್​ ಕಾಶ್ಮೀರದ ಪ್ರತ್ಯೇಕತಾವಾದಿ ಸಂಘಟನೆ ತೆಹ್ರಿಕ್​ ಇ ಹುರಿಯುತ್​ ಪಕ್ಷದ ಅಧ್ಯಕ್ಷರಾಗಿ ಮಾರ್ಚ್​ 19 ರಂದು ಅಧಿಕಾರ ಸ್ವೀಕರಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ