ದಾವಣಗೆರೆ, ಮಾ.26-ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವನಗರ ಪೆÇಲೀಸರು ದಂಪತಿಯನ್ನು ಬಂಧಿಸಿದ್ದಾರೆ.
ವೆಂಕಟೇಶ(32), ರೇಖಾ (26) ಬಂಧಿತ ದಂಪತಿಗಳು.
ನಗರದ ಬೆಳ್ಳಿ-ಬಂಗಾರ ವ್ಯಾಪಾರಿ ಒಬ್ಬರ ಬಳಿ ವೆಂಕಟೇಶ್-ರೇಖಾ ದಂಪತಿ ಚಿನ್ನ ಖರೀದಿಸಿ ಸ್ನೇಹ ಬೆಳೆಸಿದ್ದರು. ಕೆಲ ತಿಂಗಳ ಹಿಂದೆ ರೇಖಾ ವ್ಯಾಪಾರಿಗೆ ಕರೆ ಮಾಡಿ ಮಾತನಾಡಿದ್ದಳು. ಮತ್ತೊಮ್ಮೆ ಮನೆಗೆ ಕರೆದು ಪ್ರೀತಿಯ ನಾಟಕವನ್ನಾಡಿದ್ದಾಳೆ ಎನ್ನಲಾಗಿದೆ. ವ್ಯಾಪಾರಿಯನ್ನು ರೂಮ್ಗೆ ಕರೆದೊಯ್ದು ಅಶ್ಲೀಲವಾಗಿ ನಡೆದುಕೊಂಡಿದ್ದಾಳೆ ಎನ್ನಲಾಗಿದ್ದು, ಇದನ್ನು ಪತಿ ವೆಂಕಟೇಶ್ ಮೊಬೈಲ್ನಲ್ಲಿ ಸೆರೆ ಹಿಡಿದು ನಂತರ ಇಬ್ಬರೂ ಸೇರಿ ವ್ಯಾಪಾರಿಗೆ ವಿಡಿಯೋ ತೋರಿಸಿ ಬ್ಲ್ಯಾಕ್ಮೇಲ್ ಮಾಡಿ 15 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾರೆ.
ಇದಕ್ಕೆ ಹೆದರಿದ ಚಿನ್ನದ ವ್ಯಾಪಾರಿ 5 ಲಕ್ಷ ನೀಡಿದ್ದಾರೆ. ಆದರೆ ದುರಾಸೆಗೆ ಬಿದ್ದ ದಂಪತಿ ಮತ್ತೆ ಹತ್ತು ಲಕ್ಷ ಕೊಡುವಂತೆ ಒತ್ತಾಯಿಸಿದ್ದು, ಇದರಿಂದ ರೋಸಿ ಹೋದ ವ್ಯಾಪಾರಿ ಪೆÇಲೀಸರ ಮೊರೆ ಹೋಗಿ ನಡೆದ ಘಟನೆಯನ್ನು ವಿವರಿಸಿದ್ದಾರೆ.
ಈ ಬಗ್ಗೆ ಕ್ರಮ ಕೈಗೊಂಡ ಬಸವನಗರ ಪೆÇಲೀಸರು ದಂಪತಿಯನ್ನು ಬಂಧಿಸಿದ್ದಾರೆ.