ರಾಯಚೂರು.ಮಾ.26-ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಹುದ್ದೆಗಳ ನೇರ ನೇಮಕಾತಿ, ಭರ್ತಿ ಹಾಗೂ ನಿವೃತ್ತಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನ ನೌಕರರು ಪ್ರತಿಭಟನೆ ನಡೆಸಿದರು.
ನಗರದ ಸ್ಟೇಶನ್ ರಸ್ತೆಯಲ್ಲಿರುವ ಪ್ರಗತಿ ಗ್ರಾಮೀಣ ಬ್ಯಾಂಕ್ ನೌಕರರು ಅಖಿಲ ಭಾರತ ಗ್ರಾಮೀಣ ಬ್ಯಾಂಕ್ ಉದ್ಯೋಗಿಗಳ ಇಂದಿನಿಂದ 3 ದಿನಗಳ ವರೆಗೆ ಮುಷ್ಕರ ಹಮ್ಮಿಕೊಂಡು, ಗ್ರಾಮೀಣ ಬ್ಯಾಂಕ್ ಸಂಯುಕ್ತ ಕರೆಯ ಮೇರೆಗೆ ದೇಶದ 56 ಗ್ರಾಮೀಣ ಬ್ಯಾಂಕ್‍ಗಳ ತಮ್ಮ ಬೇಡಿಕೆಗಳನ್ನು ಇಟ್ಟುಕೊಂಡು ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿ ಗ್ರಾಮೀಣ ಬ್ಯಾಂಕ್‍ಗಳನ್ನು ಖಾಸಗೀಕರಣಗೊಳಿಸಬಾರದು, ಬ್ಯಾಂಕಿನ ನೌಕರರು ಮೃತಪಟ್ಟಲ್ಲಿ ಅನುಕಂಪ ಆಧಾರಿತ ಹುದ್ದೆಯನ್ನು ನೀಡುವ ನೇಮಕಾತಿಯನ್ನು ಜಾರಿಗೊಳಿಸಬೇಕು, ಗ್ರಾಮೀಣ ಬ್ಯಾಂಕ್‍ನಲ್ಲಿರುವ ಎಲ್ಲಾ ಕೆಲಸಗಾರರನ್ನು ಖಾಯಂಗೊಳಿಸಬೇಕು, ಗ್ರಾಮೀಣ ಬ್ಯಾಂಕ್‍ಗಳಿಗೆ ಐಬಿಎ ಮಾಧರಿಯಲ್ಲಿ ಸಂಧಾನ ವೇದಿಕೆಯನ್ನು ಸ್ಥಾಪಿಸಬೇಕು, ಪ್ರೇರಕ ಬ್ಯಾಂಕ್‍ಗಳಲ್ಲಿ ಜಾರಿಯಾಗಿರುವ ಕಂಪ್ಯೂಟರ್ ಆಪರೇಟರ್‍ಗಳಿಗೆ ಇಂಕ್ರಿಮೇಂಟ್‍ನ್ನು ಜಾರಿಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಎಲ್ಲಾ ಪ್ರಾದೇಶಿಕ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕೇಂದ್ರ ಹಣಕಾಸು ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ವಸಂತ ಮಾಧವ್, ಅಬ್ದುಲ್ ಗಣಿ, ಪ್ರಾಣೇಶ ಮುತಾಲಿಕ್, ಗಣಪತಿ ಹೆಗಡೆ, ಶ್ರೀನಿವಾಸ, ಪಾರ್ಥ ಸಾರಥಿ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.