ಲಕ್ನೋ, ಮಾ.25-ಸಮಾಜಘಾತುಕ ಶಕ್ತಿಗಳ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಉತ್ತರ ಪ್ರದೇಶ ಪೆÇಲೀಸರು ಇಂದು ಮುಂಜಾನೆ ನಡೆದ ಎನ್‍ಕೌಂಟ್‍ನಲ್ಲಿ ಇಬ್ಬರು ಕುಪ್ರಸಿದ್ಧ ರೌಡಿಗಳನ್ನು ಹೊಡೆದುರುಳಿಸಿದ್ದಾರೆ.
ಪೆÇಲೀಸರ ಗುಂಡಿಗೆ ಕುಖ್ಯಾತ ರೌಡಿಗಳಾದ ಶ್ರವಣ್ ಚೌಧರಿ ಮತ್ತು ಅಹಸಾನ್ ಅಲಿಯಾಸ್ ಸಲೀಂ ಬಲಿಯಾಗಿದ್ದಾರೆ. ಹತ ಗ್ಯಾಂಗ್‍ಸ್ಟರ್‍ಗಳಿಗೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ರೌಡಿಗಳ ಹುಟ್ಟಡಗಿಸಲು ನಿನ್ನೆಯಿಂದಲೇ ಕಾರ್ಯಾಚರಣೆಗೆ ಇಳಿದ ಉತ್ತರ ಪ್ರದೇಶದ ರೌಡಿ ನಿಗ್ರಹ ದಳ (ಎಆರ್‍ಎಸ್)ದ ಅಧಿಕಾರಿಗಳು, ಶ್ರವಣ್ ಚೌಧರಿಯನ್ನು ಎನ್‍ಕೌಂಟರ್‍ನಲ್ಲಿ ಕೊಂದಿದ್ದಾರೆ. ದೆಹಲಿ ಮತ್ತು ನೋಯ್ದಾದಲ್ಲಿ ಕೊಲೆ ಪ್ರಕರಣಗಳಲ್ಲಿ ಬೇಕಾಗಿದ್ದು ಶ್ರವಣ್‍ಗೆ ತಲಾ 50,000 ರೂ.ಗಳ ಬಹುಮಾನ ಘೋಷಿಸಲಾಗಿತ್ತು.
ಹತ ರೌಡಿಯಿಂದ ಎಕೆ-47 ರೈಫಲ್ ಮತ್ತು ಒಂದು ಎಸ್‍ಬಿಬಿಎಲ್ ಗನ್ ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೆÇಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತೊಬ್ಬ ಗ್ಯಾಂಗ್‍ಸ್ಟರ್ ಖತಂ: ಶಹರನ್‍ಪುರ್‍ನಲ್ಲಿ ಇಂದು ಮುಂಜಾನೆ 2 ಗಂಟೆಯಲ್ಲಿ ಪೆÇಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮತ್ತೊಂದು ಕುಖ್ಯಾತ ಕ್ರಿಮಿನಲ್ ಅಹಸಾನ್ ಅಲಿಯಾಸ್ ಸಲೀಂ ಹತನಾದ. ಕೊಲೆ, ಕೊಲೆ ಯತ್ನ, ಸುಲಿಗೆ, ಅಪಹರಣ ಸೇರಿದಂತೆ 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದು ಈತನ ತಲೆಗೆ 25,000 ರೂ. ಬಹುಮಾನ ಘೋಷಿಸಲಾಗಿತ್ತು.
ಈ ಕಾರ್ಯಾಚರಣೆಯಲ್ಲಿ ಸಬ್ ಇನ್ಸ್‍ಪೆಕ್ಟರ್ ಸಚಿನ್ ಕುಮಾರ್ ಗಾಯಗೊಂಡಿದ್ಧಾರೆ.