ರಾಜ್ಯಸಭೆಯ ಶೇ.90ರಷ್ಟು ಸದಸ್ಯರು ಕೋಟ್ಯಧಿಪತಿಗಳಾಗಿದ್ದು, ಅವರ ಸರಾಸರಿ ಆಸ್ತಿ ಮೌಲ್ಯ 55 ಕೋಟಿ ರೂ. :

ನವದೆಹಲಿ, ಮಾ.25-ರಾಜ್ಯಸಭೆಯ ಶೇ.90ರಷ್ಟು ಸದಸ್ಯರು ಕೋಟ್ಯಧಿಪತಿಗಳಾಗಿದ್ದು, ಅವರ ಸರಾಸರಿ ಆಸ್ತಿ ಮೌಲ್ಯ 55 ಕೋಟಿ ರೂ.ಗಳಾಗಿವೆ ಎಂದು ವರದಿಯೊಂದು ಹೇಳಿದೆ.
ನ್ಯಾಷನಲ್ ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾಮ್ರ್ಸ್ ಸಂಘಟನೆಗಳು ಬಹಿರಂಗಗೊಳಿಸಿರುವ ಮಾಹಿತಿಯಲ್ಲಿ ಈ ಅಂಶ ದೃಢಪಟ್ಟಿದೆ. ಸಂಸತ್ತಿನ ಮೇಲ್ಮನೆಯ 229 ಸದಸ್ಯರು ಸಲ್ಲಿಸಿರುವ ಪ್ರಮಾಣಪತ್ರಗಳನ್ನು ಈ ಸಂಸ್ಥೆಗಳು ಪರಿಶೀಲಿಸಿದ್ದು, ಇವರೆಲ್ಲರೂ ಕೋಟ್ಯಾಧೀಶ್ವರರು ಎಂದು ತಿಳಿಸಿದೆ.
ಸಂಯುಕ್ತ ಜನತಾದಳದ (ಜೆಡಿಯು) ಸಂಸದ ಮಹೇಂದ್ರ ಪ್ರಸಾದ್ ಅತ್ಯಂತ ಶ್ರೀಮಂತರಾಗಿದ್ಧಾರೆ. ಅವರ ಒಟ್ಟು ಆಸ್ತಿ ಮೌಲ್ಯ 4,078.41 ಕೋಟಿ ರೂ.ಗಳು. ಹಿರಿಯ ನಟ ಅಮಿತಾಭ್ ಬಚ್ಚನ್‍ರ ಪತ್ನಿ ಮತ್ತು ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ 1,001.64 ಕೋಟಿ ರೂ.ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಬಿಜೆಪಿಯ ರವೀಂದ್ರ ಕಿಶೋರ್ ಸಿನ್ಹಾ (857.11 ಕೋಟಿ ರೂ.ಗಳು) ಪಟ್ಟಿಯಲ್ಲಿ ಮೂರನೇ ಕ್ರಮಾಂಕದಲ್ಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ