ಕಾರು ಅಪಘಾತದಲ್ಲಿ ಕ್ರಿಕೆಟಿಗ ಶಮಿ ತಲೆಗೆ ಪೆಟ್ಟು!

ಹೊಸದಿಲ್ಲಿ: ವೈಯಕ್ತಿಕ ಕಾರಣಗಳಿಂದ ತೀವ್ರ ವಿವಾದಕ್ಕೆ ಒಳಗಾಗಿರುವ ಕ್ರಿಕೆಟಿಗ ಮೊಹಮ್ಮದ್ ಶಮಿ ಕಾರು ಅಪಘಾತಕ್ಕೀಡಾಗಿದೆ. ಡೆಹ್ರಾಡೂನ್‌‌ನಿಂದ ದೆಹಲಿಗೆ ಪ್ರಯಾಣಿಸುವ ವೇಳೆ ಅವರ ಕಾರು ಅಪಘಾತಕ್ಕೊಳಗಾಗಿದ್ದು ಶಮಿ ಬಲಗಣ್ಣಿನ ಮೇಲ್ಭಾಗ ತಲೆಗೆ ಪೆಟ್ಟಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಶಮಿ ಸದ್ಯಕ್ಕೆ ಡೆಹ್ರಾಡೂನ್‌ನಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಶಮಿ ಬಚಾವ್ ಆಗಿದ್ದಾರೆ ಎನ್ನಲಾಗುತ್ತಿದೆ. ಅವರ ತಲೆಗೆ ಹೊಲಿಗೆ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಶಮಿ ಪತ್ನಿ ಹಸೀನ್ ಜಹಾನ್ ಕಳೆದ ಕೆಲ ದಿನಗಳಿಂದ ಶಮಿ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದರು. ಎಲ್ಲಾ ಆರೋಪಗಳನ್ನು ಶಮಿ ಅಲ್ಲಗಳೆದಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ