ಮಿಯಾಮಿ,ಮಾ.25- ವಿಂಬಲ್ಡನ್ ಲೋಕದ ದಿಗ್ಗಜ, ನಂ.1 ಸ್ಟಾರ್ ಸ್ವಿಡ್ಜರ್ಲ್ಯಾಂಡ್ನ ರೋಜರ್ ಫೆಡರರ್ 175ನೆ ರ್ಯಾಂಕ್ನ ಆಸ್ಟ್ರೇಲಿಯಾದ ಥಾನಾಸಿ ಕೊಕ್ನಿಕಕಿಸ್ ವಿರುದ್ಧ ಸೋಲು ಕಾಣುವ ಮೂಲಕ ಅಗ್ರಪಟ್ಟವನ್ನು ಕಳೆದುಕೊಂಡಿದ್ದಾರೆ.
ಏಪ್ರಿಲ್2 ರಂದು ಬಿಡುಗಡೆಗೊಳ್ಳುವ ಟೆನ್ನಿಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಸ್ವೀಸ್ನ 36ರ ವಯೋಮಾನದ ರೋಜರ್ ಫೆಡರರ್ ನಂಬರ್1 ಪಟ್ಟವನ್ನು ಕಳೆದುಕೊಳ್ಳಲಿದ್ದು , ಸ್ಪೇನ್ನ ಟೆನ್ನಿಸ್ ಮಾಂತ್ರಿಕ ರಫೆಲ್ ನಡಾಲ್ ಅಗ್ರಸ್ಥಾನವನ್ನು ಕಾಯ್ದಿರಿಸಿಕೊಳ್ಳಲಿದ್ದಾರೆ.
ನಿನ್ನೆ ಇಲ್ಲಿ ನಡೆದ ಪಂದ್ಯದ ಮೊದಲ ಸುತ್ತಿನಲ್ಲಿ ಫೆಡರರ್ 3-6 ಸೆಟ್ನಿಂದ ಗೆದ್ದು ಬೀಗಿದ್ದರು , ಆದರೆ ನಂತರ ಸೆಟ್ಗಳಲ್ಲಿ ಆಸ್ಟ್ರೇಲಿಯಾದ ಯುವ ಆಟಗಾರ ಥಾನಾಸಿ 6-3, 7-6 ಸೆಟ್ಗಳಿಂದ ವಿರೋಚಿತ ಗೆಲುವು ಸಾಧಿಸುವ ಮೂಲಕ ಟೆನ್ನಿಸ್ ಲೋಕದಲ್ಲಿ ನವತಾರೆಯಾಗಿ ಬಿಂಬಿತಗೊಂಡಿದ್ದಾರೆ.
ಮುಗಿಯಿತೇ ಫೆಡರರ್ ಜಮಾನ:
ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾನ್ ಒಪನ್ ಗೆಲ್ಲುವ ಮೂಲಕ 20ನೆ ಗ್ರ್ಯಾಂಡ್ ಸ್ಲಾಮ್ ಅನ್ನು ಗೆದ್ದು ಬೀಗಿದ್ದ ಫೆಡರರ್ ಜಮಾನ ಮುಗಿಯಿತೇ ಎಂಬ ಅನುಮಾನ ಈಗ ದಟ್ಟವಾಗಿ ಮೂಡಿದೆ.
ಕಳೆದ ವಾರವಷ್ಟೇ ಫೆಡರರ್ ಜುಯೆನ್ ಮಾರ್ಟಿನ್ ಡೇಲ್ ಪೆÇೀಟ್ರೋ ವಿರುದ್ಧ 4-6, 7-6, 6-6 ಸೆಟ್ಗಳಿಂದ ಸೋಲುವ ಮೂಲಕ ಸತತ 17 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ದಾಖಲೆಗೆ ಇತಿಶ್ರೀ ಹಾಡಿದ್ದ ಫೆಡರರ್ ಈಗ ಮತ್ತೆ 175 ಶ್ರೇಯಾಂಕಿತ ಥಾನಾಸಿ ಕೊಕ್ನಿಕಕಿಸ್ ವಿರುದ್ಧ ಸೋಲುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದಾರೆ.