ಟೀಂ ಇಂಡಿಯಾ ಹಾಗೂ ಡೆಲ್ಲಿ ಡೇರ್‍ಡೆವಿಲ್ಸ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಚಲಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ:

ಡೆಹ್ರಾಡೂನ್, ಮಾ.25- ಟೀಂ ಇಂಡಿಯಾ ಹಾಗೂ ಡೆಲ್ಲಿ ಡೇರ್‍ಡೆವಿಲ್ಸ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಚಲಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಶಮಿ ತಲೆಗೆ ಗಂಭೀರ ಗಾಯವಾಗಿದ್ದು 10 ಹೊಲಿಗೆಗಳನ್ನು ಹಾಕಲಾಗಿದೆ.
ಇತ್ತೀಚೆಗೆ ತಮ್ಮ ಪತ್ನಿ ಹಾಸೆನ್ ಜಾಹೆನ್ ತನ್ನ ಮೇಲೆ ಪತಿ ಶಮಿ ಅವರು ದೈಹಿಕ ಹಾಗೂ ಮಾನಸಿಕ ದೌರ್ಜನ್ಯವೆಸಗಿದ್ದಾರೆ ಎಂದು ದೂರು ದಾಖಲಿಸಿದ್ದರು.
ಕೋಲ್ಕತ್ತಾ ಪೆÇಲೀಸರು ಹಾಗೂ ಬಿಸಿಸಿಐನ ವಿಚಾರ ಸಮಿತಿಯು ತನಿಖೆ ನಡೆಸಿ ಮೊಹಮ್ಮದ್ ಶಮಿಯನ್ನು ದೋಷಮುಕ್ತರನ್ನಾಗಿಸಿತ್ತು.
ಪತ್ನಿ ಜಾಹೆನ್‍ರ ಪ್ರಕರಣದಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಶಮಿ ಇಂದು ಬೆಳಗ್ಗೆ ಉತ್ತರಖಂಡದ ಮನಮೋಹಕ ಗಿರಿಧಾಮ ಡೆಹ್ರಾಡೂನ್ ಬಳಿ ಪ್ರಯಾಣಿಸುತ್ತಿದ್ದಾಗ ಅಪಘಾತವಾಗಿದ್ದು, ಕೆಲವು ದಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.
ಐಪಿಎಲ್‍ನಲ್ಲಿ ಡೆಲ್ಲಿಡೇರ್‍ಡೆವಿಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಶಮಿ ದೈಹಿಕ ಸಾಮಥ್ರ್ಯಕ್ಕೋಸ್ಕರ ಅಭಿಮನ್ಯು ಕ್ರಿಕೆಟ್ ಅಕಾಡೆಮಿಯಲ್ಲಿ ಬಂಗಾಳ ಬ್ಯಾಟ್ಸ್‍ಮನ್ ಅಭಿಮನ್ಯು ಈಶ್ವರನ್ ಅವರ ತಂದೆಯ ಬಳಿ ತರಬೇತಿ ಪಡೆಯುತ್ತಿದ್ದು ಇಂದು ದೆಹಲಿಗೆ ಆಗಮಿಸುವ ವೇಳೆ ಅಪಘಾತ ಸಂಭವಿಸಿದೆ.
ಏಪ್ರಿಲ್ 7 ರಿಂದ ಐಪಿಎಲ್‍ನ 11ನೆ ಆವೃತ್ತಿ ಆರಂಭಗೊಳ್ಳಲಿದ್ದು ಮೊದಲೆರಡು ಪಂದ್ಯಗಳಿಂದ ಶಮಿ ಹೊರಗುಳಿಯುವ ಅನುಮಾನವೂ ಮೂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ