ಬೆಂಗಳೂರು, ಮಾ.25- ಬುಲೆಟ್ಗೆ ಲಾರಿ ಡಿಕ್ಕಿಹೊಡೆದ ಪರಿಣಾಮ ಹಿಂಬದಿ ಕುಳಿತಿದ್ದ ಯುವತಿ ಸ್ಕಿಡ್ ಆಗಿ ಕೆಳಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಕೆ.ಎಸ್.ಲೇಔಟ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ದೆಹಲಿಯ ಅಂಕಿತ (22) ಮೃತಪಟ್ಟ ದುರ್ದೈವಿ.
ಈಕೆ ನಗರದಲ್ಲಿ ಬಿಇ ಇಂಟರ್ನ್ಶಿಪ್ ಮಾಡುತ್ತಿದ್ದು, ನಿನ್ನೆ ಮಧ್ಯರಾತ್ರಿ 12.30ರಲ್ಲಿ ಯುವಕನೊಂದಿಗೆ ಎನ್ಫೀಲ್ಡ್ ಬುಲೆಟ್ಗಾಡಿಯಲ್ಲಿ ಕಗ್ಗಲಿಪುರ ಕಡೆಗೆ ಹೋಗುತ್ತಿದ್ದಳು.
ಕನಕಪುರ ರಸ್ತೆ ನೈಸ್ರೋಡ್ ಜಂಕ್ಷನ್ ಬಳಿ ಬುಲೆಟ್ಗೆ ಲಾರಿ ಡಿಕ್ಕಿ ಹೊಡೆದು ಸ್ಕಿಡ್ ಆಗಿ ಈಕೆ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾಳೆ. ಬೈಕ್ ಸವಾರ ಅನೂಪ್ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕೆಂಪೇಗೌಡ ಆಸ್ಪತ್ರೆಯಲ್ಲಿ ಈಕೆಯ ಮೃತ ದೇಹವನ್ನು ಇಡಲಾಗಿದೆ. ಕೆ.ಎಸ್.ಲೇಔಟ್ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.