ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಮುಂಬೈನ ಕಳ್ಳಸಾಗಣೆದಾರನೊಬ್ಬನನ್ನು ಬಂಧಿಸಿ 15 ಲಕ್ಷ ರೂ. ಮೌಲ್ಯದ ಅರ್ಧ ಕೆ.ಜಿ. ಚಿನ್ನ ವಶ

ಬೆಂಗಳೂರು, ಮಾ.26-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಮುಂಬೈನ ಕಳ್ಳಸಾಗಣೆದಾರನೊಬ್ಬನನ್ನು ಬಂಧಿಸಿ 15 ಲಕ್ಷ ರೂ. ಮೌಲ್ಯದ ಅರ್ಧ ಕೆ.ಜಿ. ಚಿನ್ನ ವಶಪಡಿಸಿಕೊಂಡಿದ್ದಾರೆ.

ದುಬೈನಿಂದ ಬೆಂಗಳೂರಿಗೆ ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದಾಗ ಈತ ಸಿಕ್ಕಿ ಬಿದ್ದಿದ್ದಾನೆ.
ಇಂಡಿಗೋ ಏರ್‍ಲೈನ್‍ನಲ್ಲಿ ಮುಂಬೈನಿಂದ ನಗರಕ್ಕೆ ಬಂದಿದ್ದ ವ್ಯಕ್ತಿಯೊಬ್ಬನನ್ನು ನಿನ್ನೆ ರಾತ್ರಿ ಸೀಮಾ ಸುಂಕ ಅಧಿಕಾರಿಗಳು ತಪಾಸಣೆ ನಡೆಸಿದರು. ಯುವತಿಯರ ಚಪ್ಪಲಿಗಳು, ವಸ್ತ್ರಗಳು ಮತ್ತು ಆಭರಣಗಳಲ್ಲಿ ಚಿನ್ನಗಳನ್ನು ಈತ ಅಡಗಿಸಿಟ್ಟಿದ್ದು ಪತ್ತೆಯಾಯಿತು. ತಕ್ಷಣ ಆತನನ್ನು ಬಂಧಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ದುಬೈನಿಂದ ಮುಂಬೈ ಮಾರ್ಗವಾಗಿ ಬೆಂಗಳೂರಿಗೆ ಚಿನ್ನ ಕಳ್ಳಸಾಗಣೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಇದು ನಿದರ್ಶನವಾಗಿದೆ.

ದಾವಣಗೆರೆ, ಮಾ.25- ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಕೆಪಿಜೆ ನಗರ ಪೆÇಲೀಸರು ವಶಪಡಿಸಿಕೊಂಡಿದ್ದಾರೆ.
ಇಂದು ಬೆಳಗ್ಗೆ ನಿಟ್ಟುವಳಿ ಹೊಸಬಡಾವಣೆ ಬಳಿ ಅಕ್ರಮವಾಗಿ ಅಂಬರೀಶ್ ಎಂಬಾತ ಲಾರಿಯಲ್ಲಿ ಮರಳು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೆÇಲೀಸರು ಅಂಬರೀಶ್ ಮತ್ತು ಲಾರಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಸಂಬಂಧ ಕೆಪಿಜೆ ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ