ಬೆಂಗಳೂರು, ಮಾ.25- ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿದ ಬೈಕ್ ರಸ್ತೆ ಡಿವೈಡರ್ಗೆ ಡಿಕ್ಕಿ ಹೊಡೆದು ಸವಾರ ಸಾವನ್ನಪ್ಪಿರುವ ಘಟನೆ ಜೀವನ್ಬೀಮಾನಗರ ಸಂಚಾರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಅಸ್ಸೋಂನ ರಾಹುಲ್ಘೋಷ್ (30) ಮೃತಪಟ್ಟ ದುರ್ದೈವಿ.
ಈತ ಸಾಫ್ಟ್ವೇರ್ ಎಂಜನಿಯರ್ ಆಗಿದ್ದು, ನಗರದ ವಿನಾಯಕಲೇಔಟ್ನಲ್ಲಿ ವಾಸವಾಗಿದ್ದ. ನಿನ್ನೆ ರಾತ್ರಿ 8.30ರಲ್ಲಿ ಬೈಕ್ನಲ್ಲಿ ತನ್ನ ಸ್ನೇಹಿತನೊಂದಿಗೆ ಮನೆಗೆ ಹೋಗುತ್ತಿದ್ದ.
ಹಳೆ ಮದ್ರಾಸ್ರಸ್ತೆ, ರಾಜರಾಜೇಶ್ವರಿ ಥಿಯೇಟರ್ ಸಮೀಪ ಬೈಕ್ ಅತಿವೇಗವಾಗಿ ಚಲಿಸಿದ ಪರಿಣಾಮ ರಸ್ತೆ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದರಿಂದ ರಾಹುಲ್ಘೋಷ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ. ಆತನ ಸ್ನೇಹಿತನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮೃತನ ದೇಹವನ್ನು ಬೌರಿಂಗ್ ಆಸ್ಪತ್ರೆಯಲ್ಲಿಡಲಾಗಿದ್ದು, ಜೆ.ಬಿ.ನಗರ ಸಂಚಾರಿ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.