ಮೈಸೂರು, ಮಾ.25- ನಗರದ ಪುರಭವನದ ಆವರಣದಲ್ಲಿ ನೂತನವಾಗಿ ಮಂಟಪವೊಂದರಲ್ಲಿ ಅಮೃತಶಿಲೆಯಲ್ಲಿ ನಿರ್ಮಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಉದ್ಘಾಟನೆಯನ್ನು ವಿರೋಧಿಸಿ ಕೆಲವು ಕಾಪೆರ್Çರೇಟರ್ಗಳು ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತ ದಿಢೀರ್ ನಿರ್ಧಾರ ಕೈಗೊಡು ಕಾಪೆರ್Çರೇಟರ್ಗಳ ಗಮನಕ್ಕೆ ತಾರದೆಯೇ ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಮೇಯರ್ ಭಾಗ್ಯವತಿ, ಸದಸ್ಯರಾದ ಪುರುಷೋತ್ತಮ್, ಇಂದಿರಾ, ಎಂ.ಟಿ.ರವಿಕುಮಾರ್, ಸ್ನೇಕ್ಶ್ಯಾಮ್, ಎಸ್ಬಿಎಂ ಮಂಜು ಮತ್ತಿತರರು ನಿನ್ನೆ ರಾತ್ರಿ ಪುರಭವನ ಬಳಿ ಪ್ರತಿಭಟನೆ ನಡೆಸಿದರು.
ಈ ವೇಳೆ ಪುರುಷೋತ್ತಮ್ ಮಾತನಾಡಿ, ಪ್ರತಿಮೆ ಉದ್ಘಾಟನೆಗೆ ನಮ್ಮ ವಿರೋಧವಿಲ್ಲ. ಆದರೆ, ಪಾಲಿಕೆ ಸದಸ್ಯರ ಗಮನಕ್ಕೆ ತಾರದೆ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡಿರುವುದಕ್ಕೆ ನಮ್ಮ ಆಕ್ರೋಶವಿದೆ ಎಂದು ಹೇಳಿದರು.
ಇವರ ಪ್ರತಿಭಟನೆ ನಂತರ ಅಶೋಕಪುರಂನ ಕೆಲವು ಮಂದಿ ಆಗಮಿಸಿ ಯಾರೇ ವಿರೋಧಿಸಿದರೂ ಅಂಬೇಡ್ಕರ್ ಪ್ರತಿಮೆ ಉದ್ಘಾಟನೆಯಾಗಲೇಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಪರ-ವಿರೋಧದ ನಡುವೆಯೇ ಇಂದು ರಾಹುಲ್ಗಾಂಧಿಯವರಿಂದ ಅಂಬೇಡ್ಕರ್ ಪ್ರತಿಮೆ ಉದ್ಘಾಟನೆಗೆ ಮುಹೂರ್ತ ನಿಗದಿ ಆಗಿದೆ.