ಮೂಲಸೌಲಭ್ಯ ಅಭಿವೃದ್ಧಿಗಾಗಿ ಪಿಪಿಪಿ) ನೀತಿ-2018 ಸಿದ:್ಧ ಸಚಿವ ಆರ್.ವಿ.ದೇಶಪಾಂಡೆ

ಬೆಂಗಳೂರು, ಮಾ. 24- ರಾಜ್ಯದೆಲ್ಲೆಡೆಉತ್ತಮಗುಣಮಟ್ಟದೊಂದಿಗೆ ಮೂಲಸೌಲಭ್ಯ ಅಭಿವೃದ್ಧಿಗಾಗಿ ಮತ್ತು ಈ ಮೂಲಕಕ್ಷಿಪ್ರಗತಿಯಲ್ಲಿಆರ್ಥಿಕ ಬೆಳವಣಿಗೆ ಸಾಧಿಸುವಗುರಿಯೊಂದಿಗೆರಾಜ್ಯ ಸರಕಾರವು `ಮೂಲ ಸೌಲಭ್ಯ ಯೋಜನೆಗಳ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ನೀತಿ-2018”ನ್ನು ಸಿದ್ಧಪಡಿಸಿದೆ ಎಂದು ಬೃಹತ್ ಮತ್ತು ಮಧ್ಯಮಕೈಗಾರಿಕೆ ಹಾಗೂ ಮೂಲಸೌಲಭ್ಯಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಈ ಬಗ್ಗೆ ವಿವರಿಸಿರುವ ಸಚಿವರು, “ಪಿಪಿಪಿ ಯೋಜನೆಗಳರಾಜ್ಯ ಮಟ್ಟದಏಕಗವಾಕ್ಷಿ ಸಮಿತಿಯ ಅನುಮೋದನೆ ಮಿತಿಯನ್ನುಈಗಿರುವ 50 ಕೋಟಿರೂಪಾಯಿಗಳಿಂದ 500 ಕೋಟಿರೂಪಾಯಿಗಳಿಗೆ ಹೆಚ್ಚಿಸಲಾಗುವುದು. ಜೊತೆಗೆ, ಕರ್ನಾಟಕ ಮೂಲಸೌಲಭ್ಯ ಯೋಜನೆಗಳ ಅಭಿವೃದ್ಧಿ ನಿಧಿ, ಕರ್ನಾಟಕ ವೈಯಬಿಲಿಟಿ ಗ್ಯಾಪ್ ಫಂಡ್, ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಲಭ್ಯ ನಿಧಿ (ನ್ಯಾಷನಲ್ ಇನ್ವೆಸ್ಟ್‍ಮೆಂಟ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಫಂಡ್-ಎನ್‍ಐಐಎಫ್) ಮೂಲಕ ಹೊಸ ನಿಧಿ ಸಂಗ್ರಹ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು,” ಎಂದಿದ್ದಾರೆ.

“ಈ ಹೊಸ ನೀತಿಯು ಹಿಂದುಳಿದಿರುವ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಪಿಪಿಪಿ ಮಾದರಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ವಿಶೇಷ ಒತ್ತನ್ನು ನೀಡಿದೆ. ಇದರೊಂದಿದೆ ಈ ಮಾದರಿಯ ಯೋಜನೆಗಳಿಗೆ ಸಂಬಂಧಿಸಿದ ನೀತಿ-ನಿಯಮಗಳು, ತಾಂತ್ರಿಕ, ಕಾನೂನು ಮತ್ತು ಇನ್ನಿತರ ಆಯಾಮಗಳಿಗೆ ಸಂಬಂಧಿಸಿದ ಚಟುವಟಿಕೆಗಳ ನಿರ್ವಹಣೆಗೆ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯಲ್ಲಿ “ಪಾಲಿಸಿ ವಿಂಗ್” ಅನ್ನು ಸ್ಥಾಪಿಸಲಾಗುವುದು. ಅಲ್ಲದೆ, ನೀತಿಯ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು,” ಎಂದುಶ್ರೀಆರ್.ವಿ.ದೇಶಪಾಂಡೆ ವಿವರಿಸಿದ್ದಾರೆ.

“ಪಿಪಿಪಿ ಯೋಜನೆಗಳಿಗೆಕ್ಷಿಪ್ರಅನುಮೋದನೆ ನೀಡಲು ಮತ್ತು ಅವು ತ್ವರಿತಗತಿಯಲ್ಲಿ ಜಾರಿಗೊಳ್ಳುವಂತೆ ಮಾಡಲು ಆರ್ಥಿಕ ಸಂಪನ್ಮೂಲಗಳ ಕ್ರೋಡೀಕರಣ, ನಗರಾಭಿವೃದ್ಧಿ ಮತ್ತುತಾಂತ್ರಿಕ ವಿಷಯಗಳನ್ನು ಆಳವಾಗಿ ಬಲ್ಲ ಪರಿಣತರೊಬ್ಬರನ್ನು ನೇಮಿಸಿಕೊಳ್ಳಲಾಗುವುದು. ಒಟ್ಟಾರೆಯಾಗಿ, ಪಿಪಿಪಿ ನೀತಿ ಮತ್ತು ಯೋಜನೆಗಳ ಅನುಷ್ಠಾನಕ್ಕೆರಾಜ್ಯ ಮೂಲಸೌಲಭ್ಯ ಇಲಾಖೆಯು ಸರಕಾರದ ನಾನಾಇಲಾಖೆಗಳ ನಡುವೆ ನೋಡಲ್ ಏಜೆನ್ಸಿಯಾಗಿ ಕೆಲಸ ಮಾಡುತ್ತದೆ,” ಎಂದು ಸಚಿವರು ನುಡಿದಿದ್ದಾರೆ.

ಇದರೊಟ್ಟಿಗೆ, ಪಿಪಿಪಿ ಮಾದರಿಯಯೋಜನೆಗಳಿಗೆ ಸಂಬಂಧಿಸಿದಇಲಾಖೆಗಳ ಮೂಲಕ ಆಯ್ದ ಸಲಹೆಗಾರರ ಸೇವೆಯನ್ನು ಪಡೆಯಲಾಗುವುದು ಮತ್ತು ಈ ಬಗೆಯಯೋಜನೆಗಳ ಸುಗಮ ಜಾರಿಗಾಗಿ ಈಗ ವಾಣಿಜ್ಯ ಮತ್ತುಕೈಗಾರಿಕಾಇಲಾಖೆಯಅಡಿಯಲ್ಲಿರುವ “ಕರ್ನಾಟಕ ರಾಜ್ಯಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ”ವನ್ನು ಮೂಲಸೌಲಭ್ಯಅಭಿವೃದ್ಧಿಇಲಾಖೆಯ ವ್ಯಾಪ್ತಿಗೆ ತರಲಾಗುವುದು ಎಂದು ದೇಶಪಾಂಡೆತಿಳಿಸಿದ್ದಾರೆ.

ಅಪ್ರೈಸಲ್‍ಕೋಶರಚನೆ
ಕೆಲವು ಪಿಪಿಪಿ ಯೋಜನೆಗಳಿಗೆಕೇಂದ್ರ ಸರಕಾರದ ಮಧ್ಯಸ್ಥಿಕೆಅಥವಾ ಪರವಾನಗಿ ಅಗತ್ಯವಿರುತ್ತದೆ. ಇದರತ್ತ ಗಮನ ಹರಿಸಲು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯಲ್ಲಿ ಅಪ್ರೈಸಲ್‍ಕೋಶವನ್ನು ರಚಿಸ ಲಾಗುವುದು ಎಂದು ಸಚಿವರುಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ದೇಶೀಯ ಹೂಡಿಕೆ ಪರಿಸರವನ್ನು ಸುಧಾರಿಸುವ ಮೂಲಕ ಮೂಲಸೌಲಭ್ಯ ವಲಯದಲ್ಲಿ ಖಾಸಗಿ ವಲಯದ ಹೂಡಿಕೆಯನ್ನು ಉತ್ತೇಜಿಸುವುದು, ಮೂಲಸೌಲಭ್ಯದ ಗುಣಮಟ್ಟ ಹಾಗೂ ಪ್ರಮಾಣದ ಹೆಚ್ಚಳ, ಪಿಪಿಪಿ ಮಾದರಿಯ ಪ್ರೋತ್ಸಾಹಕ್ಕೆ ಪಾರದರ್ಶಕ ನೀತಿಯ ಬಲವನ್ನು ತುಂಬುವುದು ಸರಕಾರವು ಸಿದ್ಧಪಡಿಸಿರುವ ನೂತನ “ಮೂಲಸೌಲಭ್ಯ ಯೋಜನೆಗಳ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ನೀತಿ 2018”ರ ಉದ್ದೇಶಗಳಲ್ಲಿ ಪ್ರಮುಖವಾಗಿವೆ ಎಂದು ಸಚಿವರು ವಿವರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ