ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್‍ನಲ್ಲಿ ನಡೆಯಲಿರುವ ಕಾಮನ್‍ವೆಲ್ತ್ ಕ್ರೀಡಾಕೂಟದ(ಸಿಡಬ್ಲ್ಯುಜಿ) ಉದ್ಘಾಟನಾ ಸಮಾರಂಭದ ಪಥಸಂಚಲ, ಪಿ.ವಿ.ಸಿಂಧು ಆಯ್ಕೆ:

ನವದೆಹಲಿ, ಮಾ.24-ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್‍ನಲ್ಲಿ ನಡೆಯಲಿರುವ ಕಾಮನ್‍ವೆಲ್ತ್ ಕ್ರೀಡಾಕೂಟದ(ಸಿಡಬ್ಲ್ಯುಜಿ) ಉದ್ಘಾಟನಾ ಸಮಾರಂಭದ ಪಥಸಂಚಲನದಲ್ಲಿ ರಿಯೋ ಒಲಿಂಪಿಕ್ಸ್ ರಜತ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಭಾರತದ ತಂಡವನ್ನು ಮುನ್ನಡೆಸಲಿದ್ದಾರೆ.
ದೆಹಲಿಯಲ್ಲಿ ನಿನ್ನೆ ರಾತ್ರಿ ನಡೆದ ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಸಭೆಯಲ್ಲಿ, ಭಾರತದ ಪೆರೇಡ್‍ಗೆ ಸಿಂಧು ಅವರನ್ನು ತ್ರಿವರ್ಣ ಧ್ವಜಧಾರಿಣಿಯಾಗಿ ಆಯ್ಕೆ ಮಾಡಲು ನಿರ್ಧರಿಸಲಾಯಿತು.
ಬಹುತೇಕ ಎಲ್ಲ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಹೈದರಾಬಾದ್‍ನ ಆಟಗಾರ್ತಿ ಸಿಂಧು ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಭಾರತಕ್ಕೆ ಪದಕ ದಕ್ಕಿಸಿಕೊಡಬಲ್ಲ ನೆಚ್ಚಿನ ಆಟಗಾರ್ಗಿ ಎನಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ