ದ್ವೈವಾರ್ಷಿಕ ಚುನಾವಣೆ ನಂತರ ಸಂಸತ್ತಿನ ಮೇಲ್ಮನೆಯಲ್ಲಿ ಬಿಜೆಪಿ ಬಲ 69 :

ನವದೆಹಲಿ, ಮಾ.24-ರಾಜ್ಯಸಭೆಯ 58 ಸ್ಥಾನಗಳಿಗೆ ನಿನ್ನೆ ನಡೆದ ದ್ವೈವಾರ್ಷಿಕ ಚುನಾವಣೆ ನಂತರ ಸಂಸತ್ತಿನ ಮೇಲ್ಮನೆಯಲ್ಲಿ ಬಿಜೆಪಿ 11 ಹೆಚ್ಚುವರಿ ಸ್ಥಾನಗಳನ್ನು ಗಳಿಸಿದ್ದ ಸದಸ್ಯರ ಬಲ 69ಕ್ಕೇರಿದೆ. ಈ ಫಲಿತಾಂಶದಲ್ಲಿ ಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ಕಳೆದುಕೊಂಡಿದ್ದು, ಸದಸ್ಯರ ಸಂಖ್ಯೆ 50ಕ್ಕೆ ಕುಸಿದಿದೆ.
ನಿನ್ನೆ ರಾತ್ರಿ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ನಿವೃತ್ತರಾಗುವ ತನ್ನ 17 ಸದಸ್ಯರಿಗೆ ಪ್ರತಿಯಾಗಿ ಬಿಜೆಪಿಯ 28 ಅಭ್ಯರ್ಥಿಗಳು ಜಯಶೀಲರಾಗಿದ್ದಾರೆ. ಕಾಂಗ್ರೆಸ್‍ನಿಂದ 14 ಸದಸ್ಯರು ನಿವೃತ್ತರಾಗಲಿದ್ದು, ಆ ಪಕ್ಷದ 10 ಮಂದಿ ವಿಜೇತರಾಗಿದ್ಧಾರೆ.
245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಈ ಹಿಂದೆ 58 ಸ್ಥಾನಗಳನ್ನು ಹೊಂದಿತ್ತು. ಚುನಾವಣಾ ಫಲಿತಾಂಶದ ನಂತರ 11 ಹೆಚ್ಚುವರಿ ಸ್ಥಾನಗಳನ್ನು ಗೆಲ್ಲುವ ಮೂಲಕ ಈಗ ಒಟ್ಟು 69 ಸದಸ್ಯ ಬಲ ಹೊಂದಿದ್ದು, ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‍ನನ್ನು ಹಿಂದಕ್ಕೆ ಹಾಕಿದೆ.
ಈ ಹಿಂದೆ ಕಾಂಗ್ರೆಸ್ 54 ಸದಸ್ಯರನ್ನು ಹೊಂದಿತ್ತು. ಈಗ ನಾಲ್ಕು ಸ್ಥಾನಗಳನ್ನು ಕಳೆದುಕೊಳ್ಳುವುದರೊಂದಿಗೆ ಅದರ ಬಲ 50ಕ್ಕೆ ಇಳಿದಿದೆ.
ಉಳಿದ ಪಕ್ಷಗಳ ಬಲಾಬಲ : ಟಿಎಂಸಿ 4 (ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇಲ್ಲ), ಬಿಜೆಡಿ 3(+1), ಟಿಆರ್‍ಎಸ್ 3(+3), ಟಿಡಿಪಿ 2(ಯಾವುದೇ ಬದಲಾವಣೆ ಇಲ್ಲ), ಜೆಡಿಯು 2(-2), ಆರ್‍ಜೆಡಿ 2(+2), ಶಿವಸೇನೆ 1(ಯಾವುದೇ ಬದಲಾವಣೆ ಇಲ್ಲ), ಎನ್‍ಸಿಪಿ 1(-1), ವೈಎಸ್‍ಆರ್‍ಸಿಪಿ 1(+1), ಎಸ್‍ಪಿ 1(-5), ಎಲ್‍ಡಿಎಫ್ 1(+1).

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ