
ಮಲ್ಲಾಪ್ಪುರಂ, ಮಾ.23- ಮದುವೆಗೆ ಕೆಲವೇ ಕೆಲವು ಗಂಟೆಗಳು ಬಾಕಿಯಿರುವಾಗ 22 ವರ್ಷದ ಮಗಳನ್ನು ತಂದೆಯೇ ಹತ್ಯೆ ಮಾಡಿದ ಘಟನೆ ಕೇರಳದ ಅರೆಕೋಡ್ ಜಿಲ್ಲೆಯಲ್ಲಿ ನಡೆದಿದೆ.
ಅತಿರಾ(22) ಕೊಲೆಯಾದ ದುರ್ದೈವಿ. ಈಕೆ ಪಾತನಾಪುರಂನ ಪೆÇೀವತಿಂಗಲ್ ನಿವಾಸಿಯಾಗಿದ್ದು, ಆರೋಪಿ ತಂದೆ ರಜನ್ನನ್ನು ಪೆÇಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರ್ಮಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ತನ್ನ ಪ್ರಿಯಕರನ ಜೊತೆ ಯುವತಿಯ ಮದುವೆ ಆಗಬೇಕಿತ್ತು. ಆದರೆ ಮದುವೆಯ ಹಿಂದಿನ ದಿನವೇ ತಂದೆ ತನ್ನ ಮಗಳನ್ನು ಕೊಲೆ ಮಾಡಿದ್ದಾನೆ.
ಅತಿರಾ ಕೋಯಿಲಂದಿ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಳು. ಆತ ಬೇರೆ ಜಾತಿಯವನಾಗಿದ್ದ. ಆದರೆ ಆಕೆಯ ತಂದೆ ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ನಂತರ ಅತಿರಾ ಒತ್ತಡ ಹೇರುತ್ತಿದ್ದರಿಂದ ತಂದೆ ಮದುವೆಗೆ ಒಪ್ಪಿಕೊಂಡಿದ್ದರು. ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಇಂದು ಮದುವೆ ನಿಗದಿಯಾಗಿತ್ತು ಎಂದು ಪೆÇಲೀಸರು ತಿಳಿಸಿದ್ದಾರೆ.
ಅತಿರಾ ಹಾಗೂ ತಂದೆ ರಜನ್ ನಡುವೆ ಮದುವೆ ವಿಚಾರವಾಗಿ ನಿನ್ನೆ ಜಗಳವಾಗಿ ವಾಗ್ವಾದ ನಡೆಸಿದ್ದರು. ವಾದ -ವಿವಾದ ತಾರಕಕ್ಕೇರಿ ತಂದೆ ಮಗಳಿಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ. ಅತಿರಾಳನ್ನು ಮೆಡಿಕಲï ಕಾಲೇಜಿಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ರಜನ್ ಡ್ರೈವರ್ ಕೆಲಸ ಮಾಡುತ್ತಿದ್ದು, ಆತನನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ.