![Fire Fierce Hot Flames Burning Orange Heat](http://kannada.vartamitra.com/wp-content/uploads/2018/02/burning-678x381.jpg)
ಕೋಲಾರ, ಮಾ.23-ಜಾತ್ರಾಮಹೋತ್ಸವ ನಿಮಿತ್ತ ಮೆರವಣಿಗೆ ಹೋಗುತ್ತಿದ್ದ ಪಲ್ಲಕ್ಕಿ ಮಂಟಪಕ್ಕೆ ಏಕಾಏಕಿ ವಿದ್ಯುತ್ ತಗುಲಿ ಬೆಂಕಿ ಹೊತ್ತಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನೆಯಿಂದಾಗಿ ಕೆಲಕಾಲ ಗ್ರಾಮಸ್ಥರು ಆತಂಕಗೊಂಡಿದ್ದರು.
ಕೆಜಿಎಫ್ ತಾಲೂಕಿನ ಬೇತಮಂಗಲ ಗ್ರಾಮದ ವಿಜಯೇಂದ್ರಸ್ವಾಮಿ ಜಾತ್ರಾಮಹೋತ್ಸವ ನಿಮಿತ್ತ ರಾತ್ರಿ ಟ್ರ್ಯಾಕ್ಟರ್ಗೆ ಪಲ್ಲಕ್ಕಿಯಲ್ಲಿ ಮೆರವಣಿಗೆ ಹೋಗುತ್ತಿದ್ದಾಗ ದೀಪಾಲಂಕಾರ ಮಾಡಲಾಗಿದ್ದ ವೈರ್ ಶಾರ್ಟ್ಸಕ್ರ್ಯೂಟ್ನಿಂದಾಗಿ ಪಲ್ಲಕ್ಕಿಗೆ ಅಲಂಕಾರ ಮಾಡಿದ್ದ ಪೇಪರ್ಗೆ ಬೆಂಕಿ ತಾಗಿ ಹೊತ್ತಿಕೊಂಡಿದೆ.