
ನವದೆಹಲಿ, ಮಾ.22- ಇಂದು ಅಂತಾರಾಷ್ಟ್ರೀಯ ಜಲ ದಿನಾಚರಣೆ. ಈ ಸಂದರ್ಭದಲ್ಲಿ ಅಮೂಲ್ಯ ಜಲವನ್ನು ಸಂರಕ್ಷಿಸುವಂತೆ ರಾಷ್ಟ್ರದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ವಿಶ್ವ ಜಲ ದಿನವಾದ ಇಂದು ಅಮೂಲ್ಯ ಜಲ ಸಂರಕ್ಷಣೆಗೆ ಬದ್ಧವಾಗುವ ಪ್ರತಿಜ್ಞೆಯನ್ನು ದೇಶವಾಸಿಗಳು ಮಾಡಬೇಕು ಎಂದು ಅವರು ಸಲಹೆ ಮಾಡಿದ್ದಾರೆ.
ಜಲಶಕ್ತಿಯ ಪ್ರಾಮುಖ್ಯತೆಯನ್ನು ಜನರು ಅರಿತು ನೀರಿನ ಸಂರಕ್ಷಣೆಗೆ ಬದ್ಧವಾಗಬೇಕು ಎಂದು ಅವರು ಹೇಳಿದ್ದಾರೆ. ನೀರನ್ನು ಸಂರಕ್ಷಿಸಿದರೆ, ನಮ್ಮ ನಗರ-ಪಟ್ಟಣಗಳು, ಗ್ರಾಮಗಳು ಮತ್ತು ಶ್ರಮಿಕ ರೈತರಿಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ