ವಾಷಿಂಗ್ಟನ್, ಮಾ.22-ವಿಶ್ವಾದ್ಯಂತ ಕೋಲಾಹಲ ಸೃಷ್ಟಿಸಿರುವ ಫೇಸ್ಬುಕ್ ಬಳಕೆದಾರರ ಮಾಹಿತಿ ಸೋರಿಕೆ ಹಗರಣ ಈಗ ಎಫ್ಬಿ ಸಂಸ್ಥಾಪಕ ಮಾರ್ಕ್ ಝಗರ್ಬರ್ಗ್ ಅವರಿಗೆ ದೊಡ್ಡ ತಲೆನೋವು ತಂದಿದೆ.
20 ಶತಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ತಪ್ಪು ಆಗಿದೆ ಎಂಬುದನ್ನು ಒಪ್ಪಿಕೊಂಡಿರುವ ಎಫ್ಬಿ ಸಿಇಒ, ಅದನ್ನು ಸರಿಪಡಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ನಿಮ್ಮ ಡಾಟಾಗಳನ್ನು ರಕ್ಷಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಅದನ್ಜು ರಕ್ಷಿಸಿಕೊಳ್ಳಲು ನಿಮಗೆ ಸಾಧ್ಯವಾಗದಿದ್ದರೆ, ನಿಮಗೆ ಸೇವೆ ಸಲ್ಲಿಸುವ ಅರ್ಹತೆ ನಮಗೆ ಇಲ್ಲ ಎಂದೂ ಅವರು ಪ್ರತಿಕ್ರಿಯಿಸಿದ್ದಾರೆ.