ಮಹಾರಾಷ್ಟ್ರದ ನಾಸಿಕ್‍ನಲ್ಲಿ ನದಿಯೊಂದರ ಬಳಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ಪತ್ತೆ:

ನಾಸಿಕ್, ಮಾ.22- ಮಹಾರಾಷ್ಟ್ರದ ನಾಸಿಕ್‍ನಲ್ಲಿ ನದಿಯೊಂದರ ಬಳಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಪೆÇಲೀಸರು ಪತ್ತೆ ಮಾಡಿದ್ದಾರೆ.
ನಾಸಿಕ್‍ನ ದೇವಾಲಯಗಳ ನಗರಿ ತ್ರಯಂಬಕೇಶ್ವರ ಪಟ್ಟಣದ ನಸರ್ದಿ ನದಿಯ ಸೇತುವೆ ಕೆಳಗೆ ಗುಂಡುಗಳು ಪತ್ತೆಯಾದ ನಂತರ ಸ್ಥಳೀಯರು ಸತ್ಪೂರ್ ಪೆÇಲೀಸರಿಗೆ ನಿನ್ನೆ ಈ ಬಗ್ಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಧಾವಿಸಿದ ಪೆÇಲೀಸರು ಆ ಪ್ರದೇಶದಲ್ಲಿ ತೀವ್ರ ಶೋಧ ನಡೆಸಿದಾಗ 212 ಜೀವಂತ ಗುಂಡುಗಳು, 56 ಖಾಲಿ ಕವಚಗಳೂ ಸೇರಿದಂತೆ ಅಪಾರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಪತ್ತೆಯಾದವು.  ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ