ರಾಜ್ಯಸಭೆಯ 58 ಸ್ಥಾನಗಳಿಗೆ ನಾಳೆ ಮಹತ್ವದ ಚುನಾವಣೆ :

ನವದೆಹಲಿ, ಮಾ.22-ರಾಜ್ಯಸಭೆಯ 58 ಸ್ಥಾನಗಳಿಗೆ ನಾಳೆ ಮಹತ್ವದ ಚುನಾವಣೆ ನಡೆಯಲಿದ್ದು, ತೀವ್ರ ಕುತೂಹಲ ಕೆರಳಿಸಿದೆ. 16 ರಾಜ್ಯಗಳಿಂದ ಮೇಲ್ಮನೆಗೆ ಸದಸ್ಯರನ್ನು ಆಯ್ಕೆ ಮಾಡಲು ಮತದಾನಕ್ಕೆ ವೇದಿಕೆ ಸಜ್ಜಾಗಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಘಟಾನುಘಟಿಗಳು ಸ್ಪರ್ಧಾ ಕಣದಲ್ಲಿದ್ದಾರೆ.  ಮುಂದಿನ ತಿಂಗಳು 58 ರಾಜ್ಯಸಭಾ ಸದಸ್ಯರು ನಿವೃತ್ತರಾಗಲಿದ್ದು, ಆ ಸ್ಥಾನಗಳನ್ನು ಭರ್ತಿ ಮಾಡಲು ಸಂಸತ್ತಿನ ಮೇಲ್ಮನೆಗೆ ನಾಳೆ ಚುನಾವಣೆ ನಡೆಯಲಿದ್ದು, ಸಕಲ ಸಿದ್ದತೆಗಳು ಅಂತಿಮ ಹಂತದಲ್ಲಿದೆ.
ನಾಳೆ ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಸಂಜೆ 5ರ ನಂತರ ಮತ ಎಣಿಕೆ ಕಾರ್ಯ ಸಾಗಲಿದ್ದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.
ರಾಜ್ಯಸಭೆ ಒಟ್ಟು 245 ಸ್ಥಾನಗಳನ್ನು ಹೊಂದಿದ್ದು, ಯಾವುದೇ ಪಕ್ಷ ಮೇಲ್ಮನೆಯಲ್ಲಿ ಬಹುಮತ ಗಳಿಸಲು ಕನಿಷ್ಠ 126 ಸ್ಥಾನಗಳನ್ನು ಹೊಂದುವ ಅಗತ್ಯವಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತುತ ರಾಜ್ಯಸಭೆಯಲ್ಲಿ 58 ಸದಸ್ಯರ ಬಲ ಹೊಂದಿದೆ. ಇದು ಕಾಂಗ್ರೆಸ್ ಪಕ್ಷಕ್ಕಿಂತ ನಾಲ್ಕು ಹೆಚ್ಚುವರಿ ಸ್ಥಾನಗಳನ್ನು ಹೊಂದಿದೆ.
ಆಡಳಿತ ಪಕ್ಷವು ಈ ಚುನಾವಣೆಯಲ್ಲಿ ತನ್ನ ಸಂಖ್ಯಾಬಲವನ್ನು ಮತ್ತಷ್ಟು ವೃದ್ದಿಸಿಕೊಳ್ಳುವ ತವಕದಲ್ಲಿದೆ. ಶುಕ್ರವಾರ 16 ರಾಜ್ಯಗಳಲ್ಲಿ ಮೇಲ್ಮನೆ ಚುನಾವಣೆ ನಡೆಯಲಿದ್ದು, 11 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಇರುವುದು ಗಮನಾರ್ಹ ಸಂಗತಿ.
ಆಯಾ ರಾಜ್ಯಗಳ ವಿಧಾನಸಭೆಯ ಚುನಾಯಿತ ಪ್ರತಿನಿಧಿಗಳು ಸಂಸತ್ತಿನ ಮೇಲ್ಮನೆಗೆ ಮತ ಚಲಾಯಿಸಲಿದ್ದಾರೆ. ಏಕ ವರ್ಗಾವಣೆ ಮತದೊಂದಿಗೆ ಅನುಪಾತ ಪ್ರಾತಿನಿಧ್ಯ ಎಂದು ಕರೆಯಲ್ಪಡುವ ಪರೋಕ್ಷ ಮತದಾನ ಪ್ರಕ್ರಿಯೆ ಮೂಲಕ ಶಾಸಕರು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ.
ಪ್ರತಿ ಮತದಾರರು ತಮ್ಮ ಆದ್ಯತೆ ಆಯ್ಕೆ ಮತ ಹೊಂದಿರುತ್ತಾರೆ. ಪಟ್ಟಿಯಲ್ಲಿರುವ ಪ್ರಥಮ ಅಭ್ಯರ್ಥಿ ಗೆಲ್ಲಲು ಸಾಕಷ್ಟು ಮತಗಳನ್ನು ಹೊಂದಿದ್ದರೆ ಅಥವಾ ಜಯದ ಅವಕಾಶ ಹೊಂದಿಲ್ಲದಿದ್ದರೆ, ಮತವನ್ನು ಮುಂದಿನ ಆಯ್ಕೆಗೆ ವರ್ಗಾವಣೆಯಾಗಲಿದೆ.
ರಾಜ್ಯಸಭಾ ಸದಸ್ಯರನ್ನು ಆರು ವರ್ಷಗಳ ಅವ?ಗೆ ಚುನಾಯಿಸಲಾಗುತ್ತದೆ. ಸಂಸತ್ತಿನ ಮೇಲ್ಮನೆಯ ಸದಸ್ಯರಲ್ಲಿ ಮೂರನೇ ಒಂದು ಭಾಗದಷ್ಟು ಮಂದಿ ಪ್ರತಿ ಎರಡು ವರ್ಷಗಳ ನಂತರ ನಿವೃತ್ತರಾಗುತ್ತಾರೆ.
ಜೇಟ್ಲಿ, ಪ್ರಧಾ£? ಕಣದಲ್ಲಿ : ಈ ಹಿಂದೆ ಗುಜರಾv?ನಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಹಣಕಾಸು ಸಚಿವ ಅರುu? ಜೇಟ್ಲಿ ಈ ಬಾರಿ ಉತ್ತರ ಪ್ರದೇಶದಿಂದ ಕಣಕ್ಕಿಳಿಯಲಿದ್ದಾರೆ.
ರಾಜಸಭೆಯಲ್ಲಿ ಬಿಹಾರವನ್ನು ಪ್ರತಿನಿ?ಸಿರುವ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾ£? ಮಧ್ಯಪ್ರದೇಶದಿಂದ ಸ್ಪರ್?ಸಿದ್ದಾರೆ.
ಗುಜರಾv?ನಿಂದ ಸಚಿವರಾದ ಪುರುಷೋತ್ತವi? ರೂಪಾಲ ಮತ್ತು ಮನ್ಸುS? ಎ¯? ಮಾಂಡವಿಯಾ, ರಾಜಸ್ತಾನದಿಂದ ಭೂಪೇಂದg? ಯಾದª?ರನ್ನು ರಾಜ್ಯಸಭೆಗೆ ಕಳುಹಿಸಲು ಬಿಜೆಪಿ ಮುಂದಾಗಿದೆ. ಇನ್ನು ಮಧ್ಯ ಪ್ರದೇಶದಿಂದ ಥಾವg? ಚಂz? ಗೆಹ್ಲೋm?, ಬಿಹಾರದಿಂದ ರವಿಶಂಕg? ಪ್ರಸಾz?, ಹಿಮಾಚಲ ಪ್ರದೇಶದಿಂದ ಜೆ.ಪಿ, ನಡ್ಡಾ ರಾಜ್ಯಸಭೆ ಚುನಾವಣಾ ಅಖಾಡಕ್ಕಿಳಿದಿದ್ದಾರೆ.

16 ರಾಜ್ಯಗಳ ನಡೆಯುವ ರಾಜ್ಯಸಭಾ ಚುನಾವಣೆ ಮತ್ತು ಸ್ಥಾನಗಳು:
ರಾಜ್ಯಗಳು ಸ್ಥಾನ
ಉತ್ತರಪ್ರದೇಶ10
ಮಹಾರಾಷ್ಟ್ರ6
ಬಿಹಾರ6
ಪಶ್ಚಿಮ ?ಂಗಾಳ5
ಮಧ್ಯಪ್ರದೇಶ5
ಗುಜರಾv?4
ಕರ್ನಾಟಕ4
ಆಂಧ್ರಪ್ರದೇಶ3
ತೆಲಂಗಾಣ3
ರಾಜಸ್ತಾನ3
ಒಡಿಶಾ3
ಜಾರ್ಖಂq?2
ಛತ್ತೀ¸?ಗಢ1
ಹರಿಯಾಣ1
ಹಿಮಾಚಲ ಪ್ರದೇಶ1
ಉತ್ತರಖಂಡ1
ಭರ್ತಿ ಮಾಡಬೇಕಾದ 58 ರಾಜ್ಯಸಭಾ ಸ್ಥಾನಗಳಲ್ಲಿ, 10 ರಾಜ್ಯಗಳ 33 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 25 ಸ್ಥಾನಗಳಿಗಾಗಿ ಆರು ರಾಜ್ಯಗಳಲ್ಲಿ ಅಂದರೆ ಉತ್ತರ ಪ್ರದೇಶ, ಪಶ್ವಿಮ ?ಂಗಾಳ, ಕರ್ನಾಟಕ, ಜಾರ್ಖಂq?, ಛತ್ತೀ¸?ಗಢ ಮತ್ತು ತೆಲಂಗಾಣದಲ್ಲಿ ಮತದಾನ ನಡೆಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ