ಬೆಂಗಳೂರು, ಮಾ.22- ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ಘಟಕದ ಹತ್ತು ಮಂದಿಗೆ ಈ ಬಾರಿಯೂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂದು ಘಟಕದ ಅಧ್ಯಕ್ಷ ಡಾ.ಎಸ್.ಎಸ್.ಪ್ರಕಾಶಂ ಒತ್ತಾಯಿಸಿದರು.
ಕೆಪಿಸಿಸಿ ಕಾರ್ಮಿಕ ಘಟಕ ಕಳೆದ 25 ವರ್ಷಗಳಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ವಿವಿಧ ವಿಭಾಗಗಳ ಕಾರ್ಮಿಕರನ್ನು ಸದಸ್ಯರನ್ನಾಗಿ ಹೊಂದಿದೆ. ಕಾರ್ಮಿಕ ವಿಭಾಗ ಅಸಂಘಟಿತ ಕಾರ್ಮಿಕರಿಗೆ ಬೆನ್ನೆಲುಬಾಗಿ ನಿಂತಿದೆ. ರಾಜ್ಯದ 30 ಜಿಲ್ಲೆ, 176 ತಾಲ್ಲೂಕು, 198 ಬಿಬಿಎಂಪಿ ವಾರ್ಡ್ಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಮಿಕ ಘಟಕದ 10 ಅಭ್ಯರ್ಥಿಗಳು ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಇಚ್ಚಿಸಿದ್ದಾರೆ ಎಂದು ಹೇಳಿದರು.
ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ಎಸ್.ಎಸ್.ಪ್ರಕಾಶಂ, ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ರಮೇಶ್, ಮಂಡ್ಯ-ಸತೀಶ್ಗೌಡ, ಅರಬಾವಿ ಕ್ಷೇತ್ರದಲ್ಲಿ ಲಕ್ಕಣ್ಣ, ನೆಲಮಂಗಲದಲ್ಲಿ ಉಮಾದೇವಿ, ಕಾಗವಾಡದಲ್ಲಿ ಮಂಜುಳಾಮುಕುಂದ, ಶಿಗ್ಗಾಂವ್ನಲ್ಲಿ ರಾಜುಕಣ್ಣೂರ, ದಾಸರಹಳ್ಳಿಯಲ್ಲಿ ಈಶ್ವರರಾವ್, ಸಿಂಧಗಿಯಲ್ಲಿ ದತ್ತಾತ್ರೆಯ, ಹೆಬ್ಬಾಳದಲ್ಲಿ ಎಂ.ಡಿ.ಮುಜಾವುದ್ ಪಾಷ ಅವರಿಗೆ ಟಿಕೆಟ್ ನೀಡುವಂತೆ ಕೋರಲಾಯಿತು.