ಅಗ್ರ ನಕ್ಸಲ್ ಕಮಾಂಡರ್ ದೇವ್‍ಕುಮಾರ್ ಸಿಂಗ್ ಅಲಿಯಾಸ್ ಅರವಿಂದ್‍ಜೀ ಮೃತ:

ನವದೆಹಲಿ/ರಾಂಚಿ, ಮಾ.22-ಜಾರ್ಖಂಡ್‍ನಲ್ಲಿ ಹಲವು ವರ್ಷಗಳಿಂದ ಭದ್ರತಾ ಪಡೆಗಳ ಮೇಲೆ ಹಲವಾರು ದಾಳಿಗಳನ್ನು ನಡೆಸಿ ಸಾವು-ನೋವಿಗೆ ಕಾರಣವಾಗಿದ್ದ ಅಗ್ರ ನಕ್ಸಲ್ ಕಮಾಂಡರ್ ದೇವ್‍ಕುಮಾರ್ ಸಿಂಗ್ ಅಲಿಯಾಸ್ ಅರವಿಂದ್‍ಜೀ ಮೃತಪಟ್ಟಿರುವುದು ಮಾವೋವಾದಿಗಳಿಗೆ ದೊಡ್ಡ ಮಟ್ಟದಲ್ಲಿ ಹೊಡೆತ ಬಿದ್ದಂತಾಗಿದೆ.
ಪೆÇಲೀಸರಿಗೆ ಅಗತ್ಯವಾಗಿ ಬೇಕಾಗಿದ್ದ ಎ-ವರ್ಗದ ನಕ್ಸಲ್ ನಾಯಕ ಹಾಗೂ ರಕ್ತಪಾತಗಳ ಮಾಸ್ಟರ್ ಮೈಂಡ್ ದೇವ್‍ಕುಮಾರ್ ಜಾರ್ಖಂಡ್‍ನ ದಟ್ಟ ಅರಣ್ಯದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈತನ ಬಂಧನಕ್ಕೆ ನೆರವಾಗುವವರಿಗೆ ರಾಜ್ಯ ಸರ್ಕಾರ 1.5 ಕೋಟಿ ರೂ.ಗಳ ಬಹುಮಾನ ಘೋಷಿಸಿತ್ತು.
ಗೊಂಡಾರಣ್ಯದಲ್ಲಿ ಭದ್ರತಾ ಪಡೆಗಳ ಮೇಲೆ ಮಿಂಚಿನ ದಾಳಿ ನಡೆಸಲು ನಿಖರ ಯೋಜನೆ ರೂಪಿಸುತ್ತಿದ್ದ ದೇವ್ ಸಾವಿನಿಂದ ದಟ್ಟಡವಿಯಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಸುವ ಯೋಧರಿಗೆ ನಿರಾಳವಾಗಿದೆ.
ಜಾರ್ಖಂಡ್‍ನಲ್ಲಿ ಅತ್ಯಂತ ಪ್ರಭಾವಿ ಮಾವೋವಾದಿ ನಾಯಕನಾಗಿದ್ದ ದೇವ್, ಅಂತರ್-ಜಿಲ್ಲಾ ನಕ್ಸಲ್ ಕಾರ್ಯಾಚರಣೆಯಲ್ಲಿ ಪರಿಣಿತನಾಗಿದ್ದ. ನಿಷೇಧಿತ ಸಿಪಿಐ ಸಂಘಟನೆ ಕೇಂದ್ರ ಸಮಿತಿಯಲ್ಲಿ ಈತ ಉನ್ನತ ಶ್ರೇಣಿಯ ಸದಸ್ಯನಾಗಿದ್ದ.
ಆಕ್ರಮಣಗಳನ್ನು ನಡೆಸಲು ಯೋಜನೆ ರೂಪಿಸುವಲ್ಲಿ ಸಿದ್ಧಹಸ್ತನಾಗಿದ್ದ ದೇವ್ ಅಲಿಯಾಸ್ ಅರವಿಂದ್‍ಜೀ ರಾಜ್ಯದ ಬುದ್ಧ ಪಹಾರ್ ಮತ್ತು ಇತರ ಅರಣ್ಯ ಪ್ರದೇಶಗಳಲ್ಲಿ ಅನೇಕ ವರ್ಷಗಳಿಂದ ಕುದುರೆ ಮೇಲೆ ಸಂಚರಿಸುತ್ತಿದ್ದ. ಭದ್ರತಾಪಡೆಗಳಿಂದ ಅನೇಕ ಬಾರಿ ಕೂದಲೆಳೆಯಿಂದ ಪಾರಾಗಿದ್ದ. ಈತನನ್ನು ನಕ್ಸಲರು ಹೀರೋ ಎಂದೇ ಬಣ್ಣಿಸಿದ್ದರು.
ಈತ ನಿಶಾಂತ್ ಎಂಬ ಹೆಸರಿನಿಂದಲೂ ಗುರುತಿಸಿಕೊಂಡಿದ್ದ. ಉನ್ನತ ಶಿಕ್ಷಣ ಪಡೆದಿದ್ದ ಈತ ತಾಂತ್ರಿಕ ನಿಪುಣ. ಡಯಾಬಿಟಿಸ್ ಮತ್ತು ಮಧುಮೇಹ ಸೇರಿದಂತೆ ಕೆಲವು ಕಾಯಿಲೆಗಳಿಂದ ಬಳಲುತ್ತಿದ್ದ 50 ವರ್ಷದ ದೇವ್ ಬುದ್ದ ಪಹಾರ್ ಅರಣ್ಯ ಪ್ರದೇಶದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ