ಚಿಕ್ಕಬಳ್ಳಾಪುರ: ನವಜಾತ ಶಿಶುವನ್ನು ಜೀವಂತ ಹೂತುಹಾಕಿರುವ ಅಮಾನವೀಯ ಘಟನೆ, ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲೂಕ್ಕಿನ
ಗಡರಾಸ ಹಳ್ಳಿಯಲ್ಲಿ ನೆಡೆದಿದೆ. ಇಂದು ಬೆಳಿಗ್ಗೆ ಸಾರ್ವಜನಿಕರು ಮಗುವಿನ ಅಳುತ್ತಿದ್ದ ಧ್ವನಿ ಕೇಳಿ ಮಗುವನ್ನು ರಕ್ಷಣೆ ಮಾಡಿ
ಆಸ್ಪತ್ರೆಗೆ ದಾಖಲಿಸಿದರು.
ಹೊರವಲಯದ ರೇಷ್ಮೆ ತೋಟದಲ್ಲಿ ಕಾಗೆಗಳ ಹಾರಾಟ, ಚೀರಾಟ ಕಂಡ ಸ್ಥಳೀಯರು ಹೋಗಿ ನೋಡಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಅದಕ್ಕೆ ಕುರುಬೂರು ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಆರೈಕೆ ಮಾಡಲಾಗಿದೆ. ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು.